ಬಳ್ಳಾರಿ/ ಕಂಪ್ಲಿ : ಹೊಸದರೋಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 7.20.561.ರೂಗಳ ನಿವ್ವಳ ಲಾಭಗಳಿಸಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಡಿ. ವಿ. ಮಂಜುನಾಥ ಹೇಳಿದರು.
ಸಮೀಪದ ಹೊಸ ದರೋಜಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಛೇರಿ ಆವರಣದಲ್ಲಿ ಶನಿವಾರ ನಡೆದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಈ ಸಂಘವು 4390 ಸದಸ್ಯರನ್ನು ಒಳಗೊಂಡಿದ್ದು, 104.09 ಕೋಟಿ ರೂ.ಗಳ ಠೇವಣಿ ಸಂಗ್ರಹಿಸಿದೆ. ಕೆಸಿಸಿ, ಮಧ್ಯಮಾವಧಿ, ಬಿಡಿಸಿಸಿ,ಮೀನು ಸಾಕಾಣಿಕೆ ಸಾಲ ಸೇರಿದಂತೆ ಸುಮಾರು 708.06. ಕೋಟಿ ಸಾಲ ವಿತರಿಸಿದೆ. ಸಂಘವು ಸರ್ವ ಸದಸ್ಯರ ಹಾಗೂ ಗ್ರಾಮದ ಮುಖಂಡರ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಅಭಿವೃದ್ಧಿ ಕಾಣುತ್ತಿದೆ ಎಂದರು.
ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಮಲ್ಲಿಕಾರ್ಜುನ ಅವರು ಲೆಕ್ಕ ಪತ್ರ, ಆಡಿಟ್ ವರದಿ ಮಂಡಿಸಿದರು. ಸಂಘವು ಲೆಕ್ಕ ಪರಿಶೋಧನೆಯಲ್ಲಿ “ಎ” ಶ್ರೇಣಿಯನ್ನು ಪಡೆದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಲಿ ಮಸೀದಿ, ನಿರ್ದೇಶಕರಾದ ಪಿ.ಎಸ್.ಲಿಂಗಪ್ಪ, ಕೆ.ರಾಮಾಂಜಿನೇಯ, ವೆಂಕಟೇಶ್ ಸಾಲುಮನೆ, ಶ್ರೀನಿವಾಸ.ಡಿ., ದಾನಪ್ಪ ಎಚ್., ತಿಮ್ಮಯ್ಯ.ಕೆ. ಯರ‍್ರಿಸ್ವಾಮಿ ನಾಯಕರು, ಶೋಭಾದೇವಿ ವಿ.ಟಿ., ನಾಗಮ್ಮ, ಎನ್.ವಿ. ಹನುಮಂತ, ರವಿಪ್ರಕಾಶ್.ಎ., ಮುಖಂಡರಾದ ಮಾದಾಪುರ ಮಾರೆಪ್ಪ, ವಿ.ಭೀಮಪ್ಪ, ವಿ.ಕಾಳಪ್ಪ, ಕೆ.ಈರಣ್ಣ, ವಿ.ಹನುಮಂತಪ್ಪ, ಎನ್.ವಿ.ಷಣ್ಮುಖಪ್ಪ, ಕೆ.ಅಂಬಣ್ಣ,ಡಿ. ರಾಮಾಂಜನೇಯ ಸೇರಿದಂತೆ ಗ್ರಾಮದ ಮುಖಂಡರು ಹಮಾಲಿ ಸಂಘದ ಸದಸ್ಯರು ಹಾಗೂ ಸಂಘದ ಸಿಬ್ಬಂದಿ,ರೈತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















