ಬಳ್ಳಾರಿ / ಕಂಪ್ಲಿ : ಕರ್ನಾಟಕ ವಿಕಾಸ ಪತ್ತು ಮತ್ತು ವಿವಿಧೋದ್ದೇಶ ಸಹಕಾರ ಸಂಘ ಪ್ರಗತಿಯ ಪಥದಲ್ಲಿ ಸಾಗುತ್ತಿದ್ದು, ಸಂಘವು 2024-25ನೇ ಸಾಲಿನಲ್ಲಿ 26,81,528 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರ ಸಂಘದ ಪ್ರಭಾರ ಅಧ್ಯಕ್ಷ ಬಿ.ಮಲ್ಲಪ್ಪ ತಿಳಿಸಿದರು.
ಪಟ್ಟಣದ ಕೊಟ್ಟಾಲ್ ರಸ್ತೆಯ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ಬಳಿಯಲ್ಲಿರುವ ಕರ್ನಾಟಕ ವಿಕಾಸ ಪತ್ತು ಮತ್ತು ವಿವಿಧೋದ್ದೇಶ ಸಹಕಾರ ಸಂಘದ ಕಛೇರಿ ಆವರಣದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಪಟ್ಟಣದಲ್ಲಿರುವ ಕೇಂದ್ರ ಕಛೇರಿ ಜತೆಗೆ ಗಂಗಾವತಿ, ಕುರುಗೋಡು, ಸಿರಿಗೇರಿ ಮತ್ತು ಬಳ್ಳಾರಿ ನಗರದಲ್ಲಿ ತನ್ನ ಶಾಖೆಯನ್ನು ಹೊಂದಿದ್ದು, ಅಲ್ಲಿ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಸಂಘದ ಸದಸ್ಯರು, ಸಾರ್ವಜನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ.ಕೆ ಅಶೋಕ ಕುಮಾರ್ ಲೆಕ್ಕ ಮಂಡಿಸಿವಮಾತನಾಡಿ ಕಂಪ್ಲಿ, ಗಂಗಾವತಿ, ಕುರುಗೋಡು, ಸಿರಿಗೇರಿ ಮತ್ತು ಬಳ್ಳಾರಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ವಿಕಾಸ ಪತ್ತು ಮತ್ತು ವಿವಿಧೋದ್ದೇಶ ಸಹಕಾರ ಸಂಘವು 3339 ಸದಸ್ಯರನ್ನು ಹೊಂದಿದ್ದು, 1,63,74,500 ರೂ. ಷೇರು ಬಂಡವಾಳ ಹೊದಿದೆ. 25.63.46.348 ರೂ. ಠೇವಣಿ ಸಂಗ್ರಹಿಸಿದ್ದು, 22.35.55.134 ರೂ.ಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಸಾಲ ವಿತರಿಸಿದೆ. ಮತ್ತು ಸಂಘದ 2024-25 ನೇ ಸಾಲಿನ ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.10 % ಡಿವಿಡೆಂಡ್ ನೀಡಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಹೂವಣ್ಣ, ಎರೆಪ್ಪ, ಹನುಮಂತಪ್ಪ ಎನ್. ವೇಣುಗೋಪಾಲ್ ಎಂ, ಶೇಷಗಿರಿ ಆಚಾರ್ ಜೆ, ಮಲ್ಲಿಕಾರ್ಜುನ ಡಿ, ತಿಮ್ಮಪ್ಪ ಯು, ಶಿವಶಂಕಪ ಕೆ. ಸತೀಶ್ ರಾಯ್ಕರ್, ಗಾದಿಲಿಂಗ ಬಿ, ಹೇಮಾವತಿ ಎಂ, ಉಮಾದೇವಿ ಬಿ, ಖಾಸಿಂಬೀ ಎನ್, ರಾಜಮ್ಮ ಎಚ್, ಸರಸ್ವತಿ ಎಚ್, ಪೂರ್ಣಿಮಾ ಜಿ,ಪುಷ್ಪಲತಾಗೌಡ ಇ, ವ್ಯವಸ್ಥಾಪಕ ಎಂ.ಬಿ.ಆಂಜನೇಯ, ಸಿಬ್ಬಂದಿಗಳಾದ ಡಿ.ಮೆಹಬೂಬ್ ಪಾಷಾ, ಡಿ.ಸುಮಲತಾ, ಕೆ.ಮಂಜುನಾಥ, ಯು.ಟಿ.ಸಚಿನ್, ಡಿ.ದೀಪಿಕಾ ಸೇರಿದಂತೆ ಗ್ರಾಹಕರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















