ಬಳ್ಳಾರಿ / ಕಂಪ್ಲಿ : ಪಟ್ಟಣದ ಮುದ್ದಾಪುರ ಅಗಸಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ವಾರ್ಷಿಕ ಮಹಾಜನ ಸಭೆ ಶುಕ್ರವಾರ ಜರುಗಿತು.
ಅಧ್ಯಕ್ಷ ಕಟ್ಟೆ ಸಣ್ಣ ದುರುಗಪ್ಪ ಅವರು ಮಹಾಜನ ಸಭೆಯ ಅಧ್ಯಕ್ಷತೆವಹಿಸಿದ್ದರು.
ನಂತರ ಮುಖ್ಯ ಕಾರ್ಯನಿರ್ವಾಹಕ ಹೆಚ್.ಈರಣ್ಣ ವರದಿ ಮಂಡಿಸಿ ಮಾತನಾಡಿ, ಕಂಪ್ಲಿ ಸಂಘವು 1976-77ನೇ ಸಾಲಿನಲ್ಲಿ ಪುನರ್ ವಿಂಗಡನೆಗೊಂದು ಮತ್ತು ಹಳ್ಳಿ ಕಾರ್ಯವ್ಯಾಪ್ತಿ ಹೊಂದಿದ್ದು, ಸಂಘದ 2024-25ನೇ ಸಾಲಿನ ಆರ್ಥಿಕ ವರ್ಷ ಕೊನೆಗೊಂಡಂತೆ ಒಟ್ಟು 3981 ಸದಸ್ಯರಿದ್ದು, ಸದಸ್ಯರ ಷೇರು ಬಂಡವಾಳ 1.29.36.500 ರೂ. ಹೊಂದಿದ್ದು, ಸರಕಾರದಿಂದ 2.20 ಲಕ್ಷ ಷೇರು ಮೊತ್ತ ಇದೆ. ವಿವಿಧ ಯೋಜನೆಯಲ್ಲಿ ಸಾಲ ವಿತರಿಸಿದ್ದು, ಶೇ. 99% ಸಾಲ ವಸೂಲಾತಿ ಆಗಿರುತ್ತದೆ. ಸಂಘದಲ್ಲಿ ರೂ. 1,85,51,582 ಲಕ್ಷ ಪತ್ತೇತರ ವ್ಯವಾಹಾರ ಮಾಡಿ, ರೂ. 14.27 ಲಕ್ಷ ವ್ಯವಹಾರ ಲಾಭಗಳಿಸಿರುತ್ತದೆ. ಹಾಗೂ ಸಂಘದಲ್ಲಿ 2,57 ಲಕ್ಷ ಠೇವಣಿ ಇರುತ್ತದೆ ಯಶಸ್ವಿನಿ ವಿಮಾ ಆರೋಗ್ಯ ಯೋಜನೆ ಅಡಿಯಲ್ಲಿ 930 ಕುಟುಂಬಗಳನ್ನು ನೊಂದಾಯಿದಿಸಿರುತ್ತೇವೆ. 2024-25ನೇ ಸಾಲಿಗೆ ಸಂಘವು 10.24.940 ರೂ.ಗಳ ನಿವ್ವಳ ಲಾಭಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಳೆ ಮಲ್ಲಿಕಾರ್ಜುನ, ನಿರ್ದೇಶಕರಾದ ಅಳ್ಳಿ ನಾಗರಾಜ, ಈರಪ್ಪ ಜೋಳಮಾರ, ಸಣ್ಣಪ್ಪ ಎಸ್, ಟಿ.ನಿರಂಜನಯ್ಯ, ಗಂಗಣ್ಣ ತಳವಾರ, ರಾಜೇಶ ಶೆರೆಗಾರ, ಕೃಷ್ಣ ಕೆ, ಬಿ.ಬಸವರಾಜ, ವಿಶಾಲಾಕ್ಷಿ ಬಿ.ಎಂ, ಕೆ.ನಾಗಮ್ಮ, ದೇಶನೂರು ಮಂಜುನಾಥ, ಮುಖಂಡರಾದ ಬಿ.ಸಿದ್ದಪ್ಪ, ಕರೇಕಲ್ ಮನೋಹರ ಹಾಗೂ ಸಿಬ್ಬಂದಿಗಳಾದ ಹೆಚ್.ಈರಣ್ಣ, ಕೆ.ಪ್ರಕಾಶ, ಹೆಚ್.ಪರಶುರಾಮ, ಎನ್.ಮಂಜುನಾಥ, ಕೆ.ಭರತ್, ಹೆಚ್.ಸಿದ್ದೇಶ, ಯು.ಮಂಜುನಾಥ, ಪಣಿ ಸೋಮಪ್ಪ ಹಾಗೂ ಮುಖಂಡರು ಸೇರಿದಂತೆ ರೈತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















