ಚಾಮರಾಜನಗರ/ಹನೂರು : ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಅನ್ನ ದಾಸೋಹ, ಅಕ್ಷರ ದಾಸೋಹ ನೀಡುತ್ತಾ ಬಂದಿರುವ ಮಠ ಅದುವೇ ಸುತ್ತೂರು ಮಠ ಎಂದು ಶ್ರೀ ಪರಶಿವಮೂರ್ತಿ ತಿಳಿಸಿದರು.
ಜೆಎಸ್ಎಸ್ ಪ್ರೌಢಶಾಲೆ ಬಂಡಳ್ಳಿಯಲ್ಲಿ ನಡೆದ ರಾಜಗುರುತಿಲಕ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ಶತೋತ್ತರ ದಶಮಾನೋತ್ಸವ ಜಯಂತಿ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಗಳಿಗೆ ನುಡಿನಮನ ಸಲ್ಲಿಸಿದ ಅವರು ರಾಜೇಂದ್ರ ಮಹಾಸ್ವಾಮೀಜಿಗಳು ಸಮಾಜದ ಉದ್ಧಾರ ಶಿಕ್ಷಣ ದೊರೆತರೆ ಮಾತ್ರ ಸಾಧ್ಯ ಎಂದು ಅರಿತಿದ್ದರು. ಅವರ ಮಾರ್ಗದರ್ಶನದಲ್ಲಿ ಇವತ್ತು ಜೆಎಸ್ಎಸ್ ಸಂಸ್ಥೆ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ, ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಶ್ರೀ ಮಹದೇವಪ್ರಸಾದ್ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಉಸ್ಮಾನ್ ಖಾನ್.




















