ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ (ಟಿಎಪಿಸಿಎಂಎಸ್) ಸಂಘವು 2024-25ನೇ ಸಾಲಿನಲ್ಲಿ 40.80.ಲಕ್ಷ ರೂಗಳ ವ್ಯವಹಾರಿಕ ಲಾಭಗಳಿಸಿದರೆ, 9.05.ಲಕ್ಷ ರೂಗಳ ನಿವ್ವಳ ಲಾಭಗಳಿಸಿದೆ ಎಂದು ಮಾರಾಟ ಸಹಕಾರ ಸಂಘದ ಆಧ್ಯಕ್ಷ ಕೆ.ಭಾಸ್ಕರ್ ರೆಡ್ಡಿ ತಿಳಿಸಿದರು.
ಆವರು ಸೋಮವಾರ ಪಟ್ಟಣದ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ 76ನೇ ವಾರ್ಷಿಕ ಮಹಾಜನ ಸಭೆಯಲ್ಲಿ ಮಾತನಾಡಿ, ನಮ್ಮ ಸಂಘವು ಪ್ರಸಕ್ತ ಸಾಲಿನಲ್ಲಿ 3ಕೋಟಿ55ಲಕ್ಷ 64 ಸಾವಿರ ರೂಗಳ ರಸಗೊಬ್ಬರ, 12 ಲಕ್ಷದ 89 ಸಾವಿರ ರೂಗಳ ಕ್ರಿಮಿನಾಸಕ ಔಷಧಗಳನ್ನು ಮಾರಾಟ ಮಾಡಿದೆ. ಜೊತೆಗೆ ಸಂಘದ ವೇರ್ ಹೌಸಿಂಗ್ ವ್ಯವಹಾರದಿಂದ 9 ಲಕ್ಷದ 76 ಸಾವಿರ ರೂಗಳು, ಸಂಘದ ಮಳಿಗೆಗಳಿಂದ 9 ಲಕ್ಷರೂಗಳ ಆದಾಯ ಬಂದಿದ್ದು, ಸಂಘದಿಂದ ಪಡಿತರ ಧಾನ್ಯ ವಿತರಣೆ ಯೋಜನೆಯಲ್ಲಿ 13 ಲಕ್ಷದ 81 ಸಾವಿರ ರೂಗಳ ಧಾನ್ಯ ವಿತರಣೆ ಮಾಡಿದ್ದು, ಇದರಿಂದ 3.40. ಲಕ್ಷ ರೂ. ಗಳ ಆದಾಯ ಬಂದಿದ್ದು, ಒಟ್ಟಾರೆ ಸಂಘವು 40.80.ಲಕ್ಷ ರೂಗಳ ವ್ಯವಹಾರಿಕ ಲಾಭವನ್ನು ಗಳಿಸಿದ್ದು, ಸಿಬ್ಬಂದಿಗಳ ವೇತನ, ಇತರೆ ಖರ್ಚು ವೆಚ್ಚಗಳನ್ನು ತೆಗೆದು 9.05.ಲಕ್ಷ ರೂಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದರು.
ಸಹಕಾರ ಸಂಘದ ವ್ಯವಸ್ಥಾಪಕ ಕೆ. ವೀರೇಶ್ ವರದಿ ಮಂಡಿಸಿ ಮಾತನಾಡಿ, ಸಂಘದಲ್ಲಿ 7270 ಜನ ಸದಸ್ಯರಿದ್ದು, 29.06.ಲಕ್ಷ ರೂಗಳ ಷೇರು ಬಂಡವಾಳವಿದೆ. ಸಂಘದಲ್ಲಿ ದುಡಿಯುವ ಬಂಡವಾಳ 1.5.ಕೋಟಿ ರೂ.ಗಳಿದೆ ಎಂದರು.
ಮಹಾಜನ ಸಭೆಯ ಅಧ್ಯಕ್ಷತೆವಹಿಸಿದ್ದ ಹಿರಿಯ ನಿರ್ದೇಶಕ ವಿ.ಪ್ರಸಾದ್ರಾವ್ ಮಾತನಾಡಿ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಮಾರಾಟ ಸಹಕಾರ ಸಂಘವನ್ನು ಉತ್ತಮವಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದು, ಸಹಕಾರ ಇಲಾಖೆ ಆತ್ಯಂತ ಸ್ಪರ್ಧಾತ್ಮಕವಾಗಿದ್ದು, ಈ ವರ್ಷ ರಾಜ್ಯದಲ್ಲಿ ರಸಗೊಬ್ಬರ ಆದರಲ್ಲೂ ಮುಖ್ಯವಾಗಿ ಯೂರಿಯಾ ಗೊಬ್ಬರದ ವಿತರಣೆಯಲ್ಲಿ ತೊಂದರೆಯಾಗಿದ್ದರೂ ಸಹಿತ ನಮ್ಮ ಸಂಘದಿಂದ ಸಕಾಲದಲ್ಲಿ ಯೂರಿಯಾ ಗೊಬ್ಬರವನ್ನು ರಯತರಿಗೆ ವಿತರಿಸಲಾಗಿದೆ ಎಂದರು.
ಈ ಮಹಾಜನ ಸಭೆಯಲ್ಲಿ ಉಪಾದ್ಯಕ್ಷೆ ಟಿ.ಎಂ.ಸಾವಿತ್ರಿ, ನಿರ್ದೇಶಕರುಗಳಾದ ಎಸ್.ಜಯಲಕ್ಷ್ಮೀ, ಎನ್.ಆಂಜಿನೇಯಲು, ಬಿ.ರಮೇಶ್, ಕಾಮಗಂಡಿ ವಿರೂಪಾಕ್ಷಪ್ಪ, ಎಚ್.ಎಂ.ಪ್ರಭುಸ್ವಾಮಿ, ಕೆ.ಭೀಮಲಿಂಗಪ್ಪ, ಟಿ.ಪ್ರಭಾಕರ್, ಎಸ್.ಮಾರೇಶ್, ಮಂಜುನಾಥ ಗೂಬಾಜಿ, ವಿ.ವೆಂಕಟರಾಮಯ್ಯ, ಹೆಚ್.ಲಿಂಗಪ್ಪ, ಮುಖಂಡರಾದ ಜಿ.ಲಿಂಗನಗೌಡ, ಕಡೇಮನಿ ಪಂಪಾಪತಿ, ಪಿ.ಬ್ರಹ್ಮಯ್ಯ, ಎನ್.ಪುರುಷೋತ್ತಮ, ಬಿ.ಸಿದ್ದಪ್ಪ, ಅಳ್ಳಳ್ಳಿ ವೀರೇಶ್, ಜಿ.ರಾಮಣ್ಣ, ಡಾ.ವಿ.ಎಲ್.ಬಾಬು, ಎಸ್.ಎಂ.ನಾಗರಾಜಸ್ವಾಮಿ, ವಿವಿಧ ಸಹಕಾರ ಸಂಘಗಳ ಪ್ರತಿನಿಧಿಗಳು, ಸಾರ್ವಜನಿಕರು, ಸಹಕಾರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















