ಗುರುಮಠಕಲ್: ಸೆ 23. ಪುರಸಭೆ ಕಾರ್ಯಾಲಯದ ಪೌರ ಕಾರ್ಮಿಕರಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ (ಮೂಲ) ವತಿಯಿಂದ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಸತ್ಕರಿಸಲಾಯಿತು.
ದಲಿತ ಸಂಘರ್ಷ ಸಮಿತಿ ತಾಲೂಕ ಅಧ್ಯಕ್ಷರಾದ ಲಾಲಪ್ಪ ತಲಾರಿ ಮಾತನಾಡಿ, ಪೌರ ಕಾರ್ಮಿಕರು ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೆ ಪಟ್ಟಣದ ಸ್ವಚ್ಛತೆ ಕಡೆ ಗಮನ ಹರಿಸುತ್ತಾರೆ. ಪಟ್ಟಣ ಸುಂದರವಾಗಿ ಕಾಣಲು ಪೌರ ಕಾರ್ಮಿಕರ ಸೇವೆ ಮುಖ್ಯ. ಪೌರ ಕಾರ್ಮಿಕರು ಇತರರಂತೆ ಮನುಷ್ಯರಾಗಿದ್ದು, ಅವರನ್ನು ಕೀಳಾಗಿ ಕಾಣದೇ ಗೌರವ ನೀಡಬೇಕಾದದ್ದು, ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ನೈರ್ಮಲ್ಯ ಮೇಲ್ವಿಚಾರಕರಾದ ರಾಮಕೃಷ್ಣ ಯಾದವ್, ದಲಿತ ಸಂಘರ್ಷ ಸಮಿತಿ ಸಂಘಟನಾ ಕಾರ್ಯದರ್ಶಿ ಗುರುನಾಥ.ಕೆ, ಯುವ ಘಟಕ ಅಧ್ಯಕ್ಷ ಮೋಹನ್ ಮುಕುಡಿ, ಮಹೇಶ್ ನೀರೆಟಿ, ಜಗದೀಶ್ ಪೂಜಾರಿ ಭಾಗವಹಿಸಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















