ಬಳ್ಳಾರಿ/ ಕಂಪ್ಲಿ : ಸುಮಾರು 81.35ಲಕ್ಷ ವ್ಯಾಪಾರ ವಹಿವಾಟು ನಡೆಸಿ, ಸುಮಾರು 2.90 ಲಕ್ಷ ವ್ಯಾಪಾರ ಲಾಭ ಹೊಂದಿದ್ದು, ಸಂಘವು 2024-25ನೇ ಸಾಲಿನಲ್ಲಿ ಸುಮಾರು 6.6 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಗುಂಡಾಲ ಯರ್ರಿಸ್ವಾಮಿ ಹೇಳಿದರು.
ಇಲ್ಲಿನ ಕುಡತಿನಿ ಪಟ್ಟಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘವು ಅಭಿವೃದ್ಧಿಯತ್ತ ಸಾಗುತ್ತಿದ್ದು, ಇನ್ನಷ್ಟು ಬೆಳವಣಿಗೆಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.
ಮುಖ್ಯ ಕಾರ್ಯನಿರ್ವಾಹಕ ಆಂಜಿನೇಯ ಪದ್ಮಶಾಲಿ ಇವರು ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘವು 8296 ಜನ ಸದಸ್ಯರನ್ನು ಹೊಂದಿದ್ದು, ಸುಮಾರು 2.22 ಕೋಟಿ 17 ಸಾವಿರ ಶೇರು ಬಂಡವಾಳ ಹೊಂದಿದೆ. 1977 ಜನ ರೈತ ಸದಸ್ಯರಿಗೆ 11.51 ಕೋಟಿ ಕೆಸಿಸಿ ಬೆಳೆ ಸಾಲ ವಿತರಿಸಿದೆ ಎಂದರು.
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಸಾಧನೆ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವೈ.ಷಣ್ಮುಖ, ನಿರ್ದೇಶಕರಾದ ಪಿ.ಅನಿಲ, ಟಿ.ಬಸವರಾಜ, ಪರಶುರಾಮ ಚೌಡ್ಕಿ, ನಾಗಲಿಂಗಪ್ಪ, ಮರಿಸ್ವಾಮಿ, ಎಸ್.ನೆಟಗಂಟೆಪ್ಪ, ಚಂದ್ರಹಾಸ, ಎಂ.ಛಾಯಾದೇವಿ, ನಾಗಮ್ಮ, ಶಶಿಕಲಾ ಸೇರಿದಂತೆ ಜನಪ್ರತಿನಿಧಿಗಳು, ರೈತ ಮುಖಂಡರು ಹಾಗೂ ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















