ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಾತಿ ಗಣತಿಗೆ ಹಲವು ಸಮಸ್ಯೆ: ತಾಂತ್ರಿಕದೋಷ ಉಳ್ಳ ಆ್ಯಪ್, ಕೈಕೊಟ್ಟ ಸರ್ವರ್: ಸರಿಯಾದ ಮಾಹಿತಿ ನೀಡದ ತಹಶೀಲ್ದಾರ್ ವಿರುದ್ಧ ಶಿಕ್ಷಕರು ಗರಂ

ಗುರುಮಠಕಲ್: ಸೆ 25. ಜಾತಿ ಗಣತಿ ಪ್ರಾರಂಭವಾದ ದಿನದಿಂದ ದಿನಕ್ಕೊಂದು ಸಮಸ್ಯೆ ಎದುರಿಸುತ್ತಿರುವ ಶಿಕ್ಷಕರು ಇಂದು ತಾಲೂಕಿನ ತಹಶೀಲ್ದಾರ್ ರವರಿಗೆ ತಮ್ಮ ಸಮಸ್ಯೆಗಳ ಕುರಿತು ಮನವರಿಕೆ ಮಾಡುವ ಪ್ರಯತ್ನ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕ ತಹಶೀಲ್ದಾರ್ ಶಾಂತಗೌಡ ಬಿರಾದಾರ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಸಂತೋಷ ನೀರೆಟಿರವರ ಮಾತಿನ ಚಕಮಕಿ ನಡೆಯಿತು.

ಜಾತಿಗಣತಿಗೆ ಆಯೋಜಿಸಿರುವ ಶಿಕ್ಷಕರ ಸಮಸ್ಯೆ ಸರಿಯಾಗಿ ಆಲಿಸದೆ ಸಮರ್ಪಕ ಉತ್ತರ ನೀಡುವಲ್ಲಿ ವಿಫಲವಾದ ತಹಶೀಲ್ದಾರರು.

ಗಣಿತಿದಾರರಿಗೆ ನೂರೆಂಟು ವಿಘ್ನಗಳು:

ಮೊಬೈಲ್ ಆ್ಯಪ್ ಕಿರಿಕಿರಿ, ಆಂಡ್ರಾಯ್ಡ್ 8 ವರ್ಷನ್ ಗಿಂತ ಕಡಿಮೆ ಮೊಬೈಲ್ ಫೋನ್ ನಲ್ಲಿ ಕೆಲಸ ಮಾಡದ ಆ್ಯಪ್, ಸರಿಯಾದ ಮಾಹಿತಿ ಕೊರತೆ, ಬೇತಾಳನಂತೆ ಕಾಡುತ್ತಿರುವ ಸರ್ವರ್ ಸಮಸ್ಯೆ, ಸರಿಯಾದ ದಾರಿ ತೋರಿಸದ ಗೂಗಲ್ ಮ್ಯಾಪ್, ನಿವೃತ್ತಿ ಸನಿಹದ ಶಿಕ್ಷಕರಿಗೆ ನೂರಾರು ಕಿಲೋಮೀಟರ್ ದೂರ ಗಣತಿಗೆ ನಿಯೋಜನೆ ಹೀಗೆ ಹತ್ತು ಹಲವು ಸಮಸ್ಯೆ ಹೊತ್ತು ಗಣತಿ ಶಿಕ್ಷಕರು ತಹಸಿಲ್ ಕಚೇರಿಗೆ ತೆರಳಿದರು, ಶಿಕ್ಷಕರ ಸಮಸ್ಯೆ ಸರಿಯಾಗಿ ಆಲಿಸದೆ ತಹಶೀಲ್ದಾರ್ ಮತ್ತು ಶಿಕ್ಷಕರ ಪರವಾಗಿ ಮಾತನಾಡಿದ ತಾಲೂಕ ನೌಕರರ ಸಂಘದ ಅಧ್ಯಕ್ಷ ಸಂತೋಷ ನೀರೆಟಿ ಯವರ ಮಧ್ಯೆ ವಾಗ್ವಾದ ಪ್ರಸಂಗ ನಡೆಯಿತು.

ಜಾತಿಗಣತಿ ಸಮಸ್ಯೆ ಕುರಿತು ತಹಶೀಲ್ದಾರ್ ಅವರಿಗೆ ಶಿಕ್ಷಕರು ಸಮಸ್ಯೆಗಳ ಸುರಿಮಳೆ ಗೈದರು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಣತಿದಾರರಿಗೆ ಮನೆಪಟ್ಟಿ ನೀಡಿದ್ದಾರೆ. ಶಿಕ್ಷಕರು ತಾವು ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಬಿಟ್ಟು ಬೇರೆ ಕಡೆ ಗಣತಿ ಕಾರ್ಯ-ಕೈ ಹಾಕಿದ್ದಾರೆ. ಆ ಗ್ರಾಮದಲ್ಲಿ ಅವರಿಗೆ ಮಾಹಿತಿ ಇರುವುದಿಲ್ಲ. ಫಲಾನುಭವಿಗಳು ಓಟಿಪಿ ಹೇಳುತ್ತಿಲ್ಲ. ಗಣತಿದಾರರಿಗೆ ಗುರುತಿನ ಚೀಟಿ ಸಹ ನೀಡದೆ ಗಣತಿ ಕಾರ್ಯ ಮಾಡಲು ಹೇಗೆ ಸಾಧ್ಯ. ಗಣತಿದಾರರಿಗೆ ಸಹಾಯವಾಗಿ ಅಂಗನವಾಡಿ, ಆಶಾ, ಹಾಗೂ ಪಂಚಾಯಿತಿ ನೌಕರರು ಸಹಕರಿಸುತ್ತಿಲ್ಲ, ಮನೆ ಪಟ್ಟಿ ನೀಡಿ ಹಾಗೂ ಸರ್ವರ್ ಸಮಸ್ಯೆ ಪರಿಹರಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಿನ ಅಧ್ಯಕ್ಷ ತಹಶೀಲ್ದಾರರಿಗೆ ಮನವಿ ಮಾಡಿದರು.

ಬಳಸುತ್ತಿರುವ ಹಳೆ ಆ್ಯಪ್ ಬದಲಿಗೆ ಪರಿಷ್ಕೃತ ಹೊಸ ಆ್ಯಪ್ ಅಳವಡಿಸಿಕೊಳ್ಳಲು ಮತ್ತು ಸರ್ವರ್ ಸಮಸ್ಯೆಯು ದಿನದಿಂದ ದಿನಕ್ಕೆ ಸುಧಾರಿಸುತ್ತದೆ. ಮನೆ ಪಟ್ಟಿ ಕೊಡುತ್ತೇವೆ. ಹೆಚ್ಚುವರಿ ಶಿಕ್ಷಕರನ್ನು ಶಿಕ್ಷಕರ ಕೊರತೆ ಇರುವ ಕಡೆ ನಿಯೋಜಿಸಲಾಗಿದೆ. ಎಲ್ಲರೂ ಜನಗಣತಿ ಕಾರ್ಯಕ್ಕೆ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಶಿಕ್ಷಕರಿಗೆ ಸಿ.ಅರ್.ಪಿ ಬಾಲಪ್ಪ ಸಿರಿಗೆಂ ಮನವಿ ಮಾಡಿ ಶಿಕ್ಷಕರನ್ನು ಸಮಾಧಾನ ಮಾಡಿದರು.

ಮಧ್ಯಾಹ್ನದ ಮೇಲೆ ಆ್ಯಪ್ ಸುಧಾರಿಸುವ ಆಶಾ ಭಾವದಿಂದ ಶಿಕ್ಷಕರು ತಹಶೀಲ್ದಾರ್ ಕಚೇರಿಯಿಂದ ಮತ್ತೆ ಜಾತಿಗಣತಿಯತ್ತ ಸಾಗಿದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!