ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಹಕಾರ ಸಂಘದ ಅಭಿವೃದ್ಧಿಗೆ ಸಹಕರಿಸಿ : ಹೊಸಕೋಟೆ ಜಗದೀಶ

ಬಳ್ಳಾರಿ / ಕಂಪ್ಲಿ : ಸಹಕಾರ ಸಂಘದಲ್ಲಿ ಸದಸ್ಯರು ಶೇರು ಮಾಡಿಸಿ, ಪಿಗ್ಮಿಯೊಂದಿಗೆ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ ಹೇಳಿದರು. ತಾಲೂಕಿನ ಮೆಟ್ರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿ ಆವರಣದಲ್ಲಿ 2ನೇ ವರ್ಷದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಸಗೊಬ್ಬರ ಮಾರಾಟಕ್ಕೆ ಪರವಾನಿಗೆ ದೊರತಿದ್ದು, ಸಮರ್ಪಕವಾಗಿ ರೈತರಿಗೆ ಗೊಬ್ಬರ ವಿತರಣೆ ಮಾಡಲಾಗುವುದು. ಸಹಕಾರ ಸಂಘದಿಂದ ನ್ಯಾಯ ಬೆಲೆ ಅಂಗಡಿ ಆರಂಭಿಸಿದರೆ, ಸಂಘದ ಅಭಿವೃದ್ಧಿಗೆ ಅನುಕೂಲವಾಗಿದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆಹಾರಧಾನ್ಯ ವಹಿವಾಟಿ ಅನುಮತಿ ನೀಡುವಂತೆ ಕೋರಿದ್ದು, ಈಗಾಗಲೇ ಎರಡು ವರ್ಷವಾಗಿದ್ದು, ಇನ್ನೊಂದು ವರ್ಷದಲ್ಲಿ ನ್ಯಾಯ ಬೆಲೆ ಅಂಗಡಿಗೆ ಪರವಾನಿಗೆ ಸಿಗಲಿದೆ. ಹೊಸದಾಗಿ ಸ್ಥಾಪನೆಗೊಂಡ ಸಹಕಾರ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು. ನಂತರ ಮುಖ್ಯಕಾರ್ಯನಿರ್ವಾಹಕ ಗೌಡ್ರು ಡಿಂಡಿ ಮಹರ್ಷಿ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘವು 754 ಜನ ಸದಸ್ಯರೊಂದಿಗೆ ಸುಮಾರು 16.41 ಲಕ್ಷ ಶೇರು ಬಂಡವಾಳ ಹೊಂದಿದೆ. 98 ಜನ ಸದಸ್ಯರಿಗೆ 85.69 ಲಕ್ಷ ಕೆಸಿಸಿ ಸಾಲ, 93ಜನಕ್ಕೆ 25.80 ಲಕ್ಷ ಬಿಡಿಪಿ ಸಾಲ, ಒಂದು ಸ್ವ-ಸಹಾಯ ಗುಂಪಿಗೆ 3 ಲಕ್ಷ ಸಾಲ ವಿತರಿಸಿದೆ. ಸಹಕಾರ ಸಂಘವು ಅಭಿವೃದ್ಧಿ ಹೊಂದಲು ಸದಸ್ಯರು, ಗ್ರಾಹಕರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗಂಗಾಧರ, ನಿರ್ದೇಶಕರಾದ ಹೊನ್ನಳ್ಳಿ ಗಂಗಾಧರ, ಜಮಾಪುರ ವೀರಭದ್ರಪ್ಪ, ಅಯ್ಯಪ್ಪ ಸಿಂದಿಗೇರಿ, ಬಿ.ಚಂದ್ರಶೇಖರ, ಪಿ.ಶೇಕ್ಷಾವಲಿ, ಸಿ.ಡಿ.ಪಾಂಡುರಂಗ, ಗಿರೆಡ್ಡಿ ಮರೇಗೌಡ, ಹೆಚ್.ಪಕ್ಕೀರಪ್ಪ, ಕೆ. ಲಕ್ಷ್ಮಿ, ಎನ್.ಮಂಜುಳಾ, ಜಿ.ನಾಗರಾಜಗೌಡ, ಚಂದ್ರರೆಡ್ಡಿ ಸೇರಿದಂತೆ ಮುಖಂಡರು, ರೈತರು, ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!