ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯಲ್ಹೇರಿ: ಆರ್.ಎಸ್.ಎಸ್. ಪಥಸಂಚಲನ

ಗುರುಮಠಕಲ್‌: ತಾಲ್ಲೂಕಿನ ಯೆಲ್ಹೇರಿ ಗ್ರಾಮದಲ್ಲಿ ಸೆ.25(ಗುರುವಾರ) ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಶತಮಾನೋತ್ಸವ ವರ್ಷ ಹಾಗೂ ಸಂಘದ ಪ್ರಾರಂಭಗೊಂಡ ವಿಜಯದಶಮಿ ಉತ್ಸವ ಅಂಗವಾಗಿ ಸ್ವಯಂಸೇವಕರ ಪಥಸಂಚಲನ ಜರುಗಿತು.

ಗ್ರಾಮದ ಪ್ರಮುಖ ರಸ್ತೆಗಳ, ಬೀದಿಗಳಲ್ಲಿ ಆರ್.ಎಸ್.ಎಸ್ ಪಥಸಂಚಲನ ಸಾಗುವ ವೇಳೆ ‘ಭಾರತ್ ಮಾತಾಕೀ ಜೈ’ ಎನ್ನುವ ದೇಶ ಭಕ್ತಿಯ ಮತ್ತು ಭಾರತ ಮಾತೆಯ ಜಯಕಾರದ ಘೋಷಗಳೊಂದಿಗೆ ಸ್ವಯಂಸೇವಕರ ಮೇಲೆ ಪುಷ್ಪವೃಷ್ಟಿಯ ಮೂಲಕ ಮಾತೆಯರು ಪಥಸಂಚಲನಕ್ಕೆ ಸ್ವಾಗತ ಕೋರಿದ್ದು ಆಕರ್ಷಕವಾಗಿತ್ತು.

ದೇಶದ ಅತಿದೊಡ್ಡ ಸಂಘಟನೆಯಾಗಿರುವ ಆರ್.ಎಸ್.ಎಸ್. ಪ್ರಾರಂಭಗೊಂಡು ನೂರು ವರ್ಷಗಳು ಪೂರೈಸಿದ್ದು, ಸಂಘದ ವಿಚಾರಗಳನ್ನು ಪ್ರತಿ ಗ್ರಾಮದ ಮನೆಗಳಿಗೆ ತಲುಪಿಸುವ ಕಾರ್ಯ ಮತ್ತು ಜಾತಿ ಬೇಧದ ಮೇಲು-ಕೀಳು ಭಾವನೆಗಳನ್ನು ತೊರೆದು ರಾಷ್ಟ್ರ ರಕ್ಷಣೆಗೆ ಒಗ್ಗೂಡುವ ಸಂದೇಶವನ್ನು ಕಾರ್ಯಕ್ರಮದ ವಕ್ತಾರರಾದ ಗಿರೀಶ್ ಹೆಬ್ಬಾರ್ ರವರು ನೀಡಿದರು.

ಭಗವದ್ ಧ್ವಜಕ್ಕೆ ಗೌರವ ಸಲ್ಲಿಸುವ ಮೂಲಕ ಪಥಸಂಚಲನ ಸಂಪನ್ನಗೊಂಡಿತು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!