
ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಶೀಘ್ರವೇ ಬೆಳೆ ನಷ್ಟ ಪರಿಹಾರ ನೀಡಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳು ಮತ್ತು ಸ್ವ ಸಹಾಯ ಸಂಘಗಳಲ್ಲಿನ ರೈತರ ಸಾಲ ಮನ್ನ ಮಾಡಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷ ಭೀಮರಾಯ ಯೆಲ್ಹೇರಿ ಮನವಿ ಮಾಡಿದ್ದಾರೆ.
ಯಾದಗಿರಿ|ಗುರುಮಠಕಲ್: ಸೆ. 29 ಇತ್ತೀಚೆಗೆ ಸುರಿದ ಅತಿವೃಷ್ಟಿ ಮಳೆಯಿಂದಾಗಿ ತೊಗರಿ, ಹೆಸರು, ಹತ್ತಿ, ಆಜ್ವಾನ, ಸೂರ್ಯಕಾಂತಿ ದಂತಹ ಬೆಳೆಗಳು ಜಲಾವೃತಗೊಂಡು ನಾಶವಾಗಿವೆ. ಬೆಳೆ ಹಾನಿಯಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಬೆಳೆಗಳಿಗೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸತತ ಮಳೆಯಿಂದ ಬೆಳೆಗಳಾದ ತೊಗರಿ ಬೆಳೆಗೆ ನೆಟೆ ರೋಗ, ಹತ್ತಿ ಬೆಳೆಗೆ ತಾಮ್ರ ರೋಗ ಹಾಗೂ ಕಾಂಡ ಕೊರೆಯುವ ಹುಳದ ಬಾಧೆಯಿಂದ ನಾಶ ಸಂಭವಿಸಿದೆ.
ಸಂಬಂಧಿತ ಇಲಾಖೆಗಳು ಹಾನಿಗೊಳಗಾದ ಬೆಳೆಗಳ ಸಮೀಕ್ಷೆಯನ್ನು ತ್ವರಿತ ಗತಿಯಲ್ಲಿ ಮಾಡಿ ರೈತರಿಗೆ ಬೆಳೆ ಹಾನಿಯ ಪರಿಹಾರ ಮತ್ತು ರಾಷ್ಟ್ರೀಕೃತ ಮತ್ತು ವಿವಿಧ ಸ್ವ ಸಹಾಯ ಸಹಕಾರ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















