ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂಗಮೇಶ ಎನ್ ಜವಾದಿ ರಚಿಸಿದ ‘ವೈಚಾರಿಕ ಚಿಂತನೆ’ ಕೃತಿ ಲೋಕಾರ್ಪಣೆ

ಬೀದರ್/ ಬಸವಕಲ್ಯಾಣ: ಪರಿಸರ ಸಂರಕ್ಷಕ,
ಸಾಹಿತಿ, ಲೇಖಕ, ಪತ್ರಕರ್ತ, ಬಸವ ತತ್ವ ಪ್ರಚಾರಕ ಶರಣ ಸಂಗಮೇಶ ಎನ್ ಜವಾದಿ ರಚಿಸಿದ “ವೈಚಾರಿಕ ಚಿಂತಕರು” ಕೃತಿಯನ್ನು ಬಸವಾದಿ ಶರಣರ ಪವಿತ್ರ ಭೂಮಿ ಬಸವಕಲ್ಯಾಣದ ಹರಳಯ್ಯ ಗವಿಯ ಆವರಣದಲ್ಲಿ ಜರುಗುತ್ತಿರುವ
ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮದಲ್ಲಿ ಇಂದು ಬುಧವಾರ ಮುಂಜಾನೆ 11 ಗಂಟೆಗೆ ನಡೆಯುವ ಹುತಾತ್ಮ ದಿನಾಚರಣೆ ಪ್ರದಾನ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಕಲ್ಯಾಣ ಮಾಹಾಮನೆ ಮಹಾಮಠ ಗುಣತೀರ್ಥವಾಡಿ ಬಸವಕಲ್ಯಾಣದ ಪರಮ ಪೂಜ್ಯರಾದ ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಬಸವೇಶ್ವರ ಸೇವಾ ಟ್ರಸ್ಟ್ ಮುಖ್ಯಸ್ಥೆ ಶರಣೆ ಇಂದುಮತಿ ಗಾರಂಪಳ್ಳಿ ಮಾತಾಜಿ, ಹಿರಿಯ ಸಾಹಿತಿ ಸೋಮನಾಥ ಯಾಳವಾರ ರವರು ಕೃತಿ ಲೋಕಾರ್ಪಣೆ ಮಾಡುವರು. ದಿವ್ಯ ನೇತೃತ್ವ ಹರಳಯ್ಯ ಗವಿ ಮುಖ್ಯಸ್ಥೆ ಶರಣೆ ಗಂಗಾಂಬಿಕೆ ಅಕ್ಕನವರು ವಹಿಸುವರು.
ಶರಣ ನಾಗಯ್ಯ ಸ್ವಾಮಿ, ವೈಜನಾಥ ಕಾಮಶೆಟ್ಟಿ , ಶಂಕ್ರಪ್ಪ ಪಾಟೀಲ, ಜಗನ್ನಾಥ ರಾಚೋಟಿ, ದತ್ತಾತ್ರೇಯ ಬಾಂದೇಕರ್ ಸೇರಿದಂತೆ ಅನೇಕರು ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಶರಣ ಶಿವರಾಜ್ ಶಾಶೆಟ್ಟಿ ಕೋಶಾಧ್ಯಕ್ಷರು ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಬಸವಕಲ್ಯಾಣ ರವರು ವಹಿಸುವರು.
ಸಮಾಜದ ಅನೇಕ ವಿಷಯನ್ನೊಳಗೊಂಡ ಆಯ್ದ ಲೇಖನಗಳ ಗೊಚ್ಚವೇ ಈ ಕೃತಿಯಾಗಿದೆ. ಕೃತಿಯಲ್ಲಿ
ಸಮಾಜ ಮುಖಿ ಚಿಂತನೆ, ಕಲ್ಯಾಣ
ಕ್ಷೇತ್ರ, ರೈತರ ಸಮಸ್ಯೆ ಮತ್ತು ಪರಿಹಾರ,
ವೈಚಾರಿಕ ಚಿಂತಕರ ಹಾಗೂ ಸಾಹಿತಿಗಳ ಕಿರು ಪರಿಚಯ ಭಾವದಿಂದ ಕೂಡಿದ ಕೃತಿ ಇದಾಗಿದ್ದು. ಎಲ್ಲರೂ ಕೃತಿಯನ್ನು ಕೊಂಡು ಓದಲೇಬೇಕಾದ ಉತ್ತಮ ಕೃತಿ ಇದಾಗಿದೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!