
ಯಶಸ್ಸಿನ ಕುರಿತು ವಿದ್ಯಾರ್ಥಿಗಳಿಗೆ ಗಣ್ಯರಿಂದ ಸಲಹೆ.
ಗುರುಮಠಕಲ್: ಸೆ. 30 ಪಟ್ಟಣದ ಗುರುಕುಲ ರೂರಲ್ ಡೆವೆಲಪಮೆಂಟ್ ಎಜುಕೇಶನ್ ಸೊಸೈಟಿ ಗುರುಮಠಕಲ್. ಎಸ್ ವಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಜರುಗಿತು. ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪ್ರಥಮ ವರ್ಷದ ವಿದ್ಯಾಥಿಗಳಿಗೆ ಸ್ವಾಗತ ಸಮಾರಂಭ ಆಯೋಜಿಸಲಾಗಿತ್ತು. ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಕಾರ್ಯಕ್ರಮ ಉದ್ಘಾಟಿಸಿದರು.
ವಿದ್ಯಾರ್ಥಿನಿಯರ ಸ್ವಾಗತ ಗೀತೆ, ಭರತನಾಟ್ಯ, ಸಾಧಕರಿಗೆ ಸನ್ಮಾನ, ಕಾಲೇಜಿನ ಕುರಿತಾದ ವರದಿ ವಾಚನ, ವಿದ್ಯಾರ್ಥಿಗಳ ಅನಿಸಿಕೆ ಭಾಷಣ ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆ ತಂದು ಕೊಟ್ಟವು.
ವಿದ್ಯಾರ್ಥಿಗಳು ಎಂದಿಗೂ ಶಿಸ್ತು, ತಾಳ್ಮೆ, ವಿನಯ ಕಳೆದುಕೊಳ್ಳಬಾರದು. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶ್ರದ್ಧೆಯಿಂದ ಓದುವ ಕಡೆ ಗಮನಹರಿಸಿ ತಮ್ಮ ಗುರಿಯನ್ನು ಉತ್ತಮ ರೀತಿಯಲ್ಲಿ ತಲುಪಬೇಕೆಂದು ವೇದಿಕೆಯನ್ನು ಅಲಂಕರಿಸದ ಗಣ್ಯರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಶಶಿಕಾಂತ ಜನಾರ್ಧನ ಮನುಷ್ಯನ ವ್ಯಕ್ತಿತ್ವ ಹೂವುಗಳಿಗೆ ಹೋಲಿಕೆ ಮಾಡಿ ವಿದ್ಯಾರ್ಥಿಗಳಿಗೆ ಯಶಸ್ಸಿಗೆ ಮೂರು ಸೂತ್ರಗಳಾದ ಆರೋಗ್ಯ, ಹಣ, ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲು ತಿಳಿಸಿದರು.
ರಾಜ್ಯ ಮಟ್ಟಕ್ಕೆ ಉತ್ತಮ ಶಿಕ್ಷಕರಾಗಿ ಭಾಜನರಾದ ಸುನಿಲ್ ಶುಕ್ಲಾ ಮಾತನಾಡಿ ಪ್ರತಿಭೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಇರುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಓದಿನ ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆ, ನೃತ್ಯ, ಸಂಗೀತ ಸೇರಿದಂತೆ ಸಹಪಠ್ಯ ಚಟುವಟಿಕೆಗಳನ್ನು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜೇಶ್ವರ್ ರೆಡ್ಡಿ, ಸಂಸ್ಥೆಯ ಕಾರ್ಯದರ್ಶಿ ಎಮ್. ಬಿ. ನಾಯ್ಕಿನ್ ,
ಕಾಲೇಜಿನ ಉಪನ್ಯಾಸಕರಾದ ರಮೇಶ್, ವೀರೇಶ್ ಅವಂಟಿ, ಗುಂಡಪ್ಪ ಸಜ್ಜನ, ನವಾಜರೆಡ್ಡಿ, ಸೇರಿದಂತೆ ಬೋಧಕ ವರ್ಗ ಮತ್ತು ವಿಧ್ಯಾರ್ಥಿಗಳು ಇದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















