ಬಳ್ಳಾರಿ / ಕಂಪ್ಲಿ : ಸದ್ಯ ಚರ್ಚೆಯಲ್ಲಿರುವ ವಿಷಯ ಅಂದ್ರೆ ಜಾತಿ ಗಣತಿ ಹೌದು ದಸರಾ ರಜೆಯಲ್ಲಿ ಶಿಕ್ಷಕರಿಗೆ ಜಾತಿ ಗಣತಿಯ ಜವಾಬ್ದಾರಿ ನೀಡಿದ್ದಾರೆ. ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೆ.22 ರಿಂದ ಆರಂಭವಾಗಿದ್ದು, ರಾಜ್ಯದೆಲ್ಲೆಡೆ ಶಿಕ್ಷಕರೇ ಗಣತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಕಷ್ಟು ಪ್ರದೇಶದಲ್ಲಿ ಸರ್ವರ್ ತೊಂದರೆಯಿಂದ ಶಿಕ್ಷಕರು ಹಲವು ರೀತಿಯ ಸಮಸ್ಯೆಗೆ ಸಿಲುಕುತ್ತಿದ್ದಾರೆ ಗಣತಿ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿಯಲ್ಲಿ ಸಾಧಿಸಲಾರದೇ ಇಕ್ಕಟ್ಟಿನ ಸಂದರ್ಭಗಳೇ ಎದುರಾಗಿದ್ದು ಹೆಚ್ಚು. ಆದ್ರೆ ಕಂಪ್ಲಿ ತಾಲೂಕಿನ ಶಿಕ್ಷಕರು ತಮಗೆ ನಿಗದಿ ಪಡಿಸಿದ ಗಣತಿ ಕಾರ್ಯವನ್ನು ಪೂರೈಸುವ ಮೂಲಕ ವಿನೂತನ ಪ್ರಗತಿ ಸಾಧಿಸಿ ಗಣತಿದಾರರಿಗೆ ಮಾರ್ಗದರ್ಶಿಯಾಗಿದ್ದಾರೆ.
ಗಣತಿ ಮುಗಿಸಿದ 5 ಗಣತಿದಾರರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರರಾದ ಜೂಗಲ್ ಮಂಜು ನಾಯಕ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶ್ರೀಕುಮಾರ್, ಸೇರಿದಂತೆ ಮೇಲ್ವಿಚಾರಕರು ಹಾಗೂ ಇತರೆ ಸಿಬ್ಬಂದಿಯವರು ಉಪಸ್ಥಿರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















