ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಶ್ರೀ ತೇಜಸ್ವಿ ಸೂರ್ಯ ಅವರನ್ನು ಜನ ವಿಶ್ವಾಸ ಮಸೂದೆ ತಿದ್ದು ಪಡಿ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸರಕಾರದ ಪ್ರಕಟಣೆ ತಿಳಿಸಿದೆ.
ಸರಕಾರದ ಈ ನಿರ್ಧಾರವನ್ನು ಸ್ವಾಗತಿಸಿದ ಅವರು ಈ ಬಗ್ಗೆ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಗೌರವಾನ್ವಿತ ಸ್ಪೀಕರ್ ಶ್ರೀ ಓಂ ಬಿರ್ಲಾ , ಗೌರವಾನ್ವಿತ ಮಂತ್ರಿಗಳಾದ ಶ್ರೀ ಕಿರೆನ್ ರಿಜಿಜು ಮತ್ತು ಶ್ರೀ ಪಿಯುಷ್ ಗೋಯಲ್ ಅವರುಗಳನ್ನು ಅಭಿನಂದಿಸಿದ್ದಾರೆ.
ಜನ ವಿಶ್ವಾಸ್ ಮಸೂದೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಕನಿಷ್ಠ ಸರ್ಕಾರದ ದೃಷ್ಟಿ, ಗರಿಷ್ಠ ಆಡಳಿತ ಮತ್ತು ವ್ಯವಹಾರವನ್ನು ಸುಲಭಗೊಳಿಸುವುದನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ತೇಜಸ್ವಿ ಸೂರ್ಯ ಅವರು ಅಭಿಪ್ರಾಯಪಟ್ಟಿದ್ದಾರೆ .
ಜೀವನವನ್ನು ಸುಲಭಗೊಳಿಸುವ, ವಿಶ್ವಾಸವನ್ನು ಬಲಪಡಿಸುವ ಮತ್ತು ಹೊಸ ಉದ್ಯಮಶೀಲತಾ ಪ್ರಯಾಣವನ್ನು ಹುಟ್ಟುಹಾಕುವ ಮಸೂದೆಯನ್ನು ರೂಪಿಸಲು ಸಹಾಯ ಮಾಡಲು ಈ ಜವಾಬ್ದಾರಿಯನ್ನು ಅತ್ಯಂತ ಬದ್ಧತೆಯಿಂದ ನಿರ್ವಹಿಸಲು ಎದುರು ನೋಡುತ್ತಿದ್ದೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಬೆಂಗಳೂರು/ ಶಿವಮೊಗ್ಗ.




















