ವಿಜಯಪುರ ಜಿಲ್ಲೆಯ ಇಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ನೂತನ ಪಿಎಸ್ಐ ಶ್ರೀ ರಾಜು ಮಮದಾಪುರ ಆಗಮಿಸಿದ್ದು ಹಾಗೂ ಹಾಲಿ ಇರುವ ಪಿಎಸ್ಐ ಸೋಮೇಶ್ ಗೆಜ್ಜಿ ರವರಿಗೆ ಬೀಳ್ಕೊಡುವ ಸಮಾರಂಭ ಇಂದು ಇಂಡಿ ಪಟ್ಟಣದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜರುಗಿತು.
ಇಂಡಿ ಗ್ರಾಮೀಣ ಪಿಎಸ್ಐ ರವರು ಸರ್ಕಾರಿ ಆದೇಶದ ಮೇರೆಗೆ ಚಡಚಣ ತಾಲೂಕಿಗೆ ವರ್ಗಾವಣೆಗೊಂಡರು ಸುಮಾರು 2 ವರ್ಷ 4 ತಿಂಗಳು ಇಂಡಿ ಗ್ರಾಮೀಣ ಪೊಲೀಸ್ ಸ್ಟೇಷನ್ ನಲ್ಲಿ ಕಾರ್ಯ ನಿರ್ವಹಿಸಿ ಈಗ ಚಡಚಣ ತಾಲೂಕಿಗೆ ವರ್ಗಾವಣೆಗೊಂಡ ಕಾರಣ ಇಲಾಖೆ ವತಿಯಿಂದ ಬೀಳ್ಕೊಡುಗೆ ಮಾಡಿ ಪಿಎಸ್ಐ ಸೋಮೇಶ್ ಗೆಜ್ಜಿ ಅಧಿಕಾರ ಹಸ್ತಾಂತರಿಸಿದರು ಹಾಗೂ ನೂತನ ವಾಗಿ ಅಧಿಕಾರ ಸ್ವೀಕರಿಸಿದ ಪಿಎಸ್ಐ ಶ್ರೀ ರಾಜು ಮಮದಾಪುರ ರವರಿಗೆ ಗ್ರಾಮೀಣ ಪೊಲೀಸ್ ಠಾಣೆಗೆ ಪೊಲೀಸ್ ಇಲಾಖೆ ವತಿಯಿಂದ ಸ್ವಾಗತಿಸಿ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಗಳು ತಾಲೂಕಿನ ಗ್ರಾಮೀಣ ಭಾಗದ ಗ್ರಾಮಸ್ಥರು ಹಿರಿಯರು ಯುವಕರು ಭಾಗಿಯಾಗಿ ಸ್ವಾಗತಿಸಿ ವಂದಿಸಿ ಬೀಳ್ಕೊಟ್ಟರು.
ವರದಿ ಮನೋಜ್ ನಿಂಬಾಳ




















