ಕಲಬುರಗಿ :ಯಡ್ರಾಮಿ ತಾಲೂಕಿನ ಮೈಕ್ರೋ ಫೈನಾನ್ಸ್ ನವರಿಗೆ ಸಭೆ ಕರೆದು ಹಳ್ಳಿಯ ಸಾರ್ವಜನಿಕರಿಗೆ ಕಿರುಕುಳ ನೀಡಿದಂತೆ ಯಡ್ರಾಮಿ ಪಿಎಸ್ಐ ವಿಶ್ವನಾಥ್ ರೆಡ್ಡಿ ಮೈಕ್ರೋ ಫೈನಾನ್ಸನವರಿಗೆ ತಾಕೀತು ಮಾಡಿದರು. ಆರ್ ಬಿ ಐ ನಿಯಮದ ಪ್ರಕಾರ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಈ ಸಂದರ್ಭದಲ್ಲಿ ಕರೆ ನೀಡಿದರು. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4:00 ವರೆಗೆ ಗ್ರಾಹಕರೊಂದಿಗೆ ದೂರವಾಣಿಯ ಸಮಾಲೋಚನೆಯಲ್ಲಿ ತೊಡಗಬೇಕು ಒಂದು ವೇಳೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಗ್ರಾಹಕರೊಂದಿಗೆ ಅನುಚಿತ ವರ್ತನೆ ತೋರಿದಲ್ಲಿ ಕಾನೂನಾತ್ಮಕ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಈ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಗೆ ಹಾಗೂ ಮೈಕ್ರೋ ಫೈನಾನ್ಸ್ ಕಂಪನಿಯವರಿಗೆ ಸಭೆ ಕರೆದು ಎಚ್ಚರಿಕೆ ನೀಡಿದರು.
- ಕರುನಾಡ ಕಂದ




















