ಕಾಳಗಿ: ಸತತ ಮಳೆಯಿಂದ ತತ್ತರಿಸಿ ಬೆಳೆ ನಷ್ಟವಾಗಿ ಅನ್ನದಾತರು ಕಂಗಲಾಗಿದ್ದಾರೆ ಹೀಗಾಗಿ ಜಿಲ್ಲೆಯನ್ನು ಕೂಡಲೇ ಹಸಿ ಬರಗಾಲವಾಗಿ ಘೋಷಣೆ ಮಾಡಬೇಕು ಎಂದು ರೈತ, ದಲಿತ, ಕನ್ನಡ ಪರ ಸಂಘಟನೆಗಳ ಹೋರಾಟ ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ.
ಪಟ್ಟಣದಲ್ಲಿ ಶನಿವಾರ ಬಸವೇಶ್ವರ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನೆ ಹಮ್ಮಿಕೊಂಡು ಕಲಬುರಗಿ-ಚಿಂಚೋಳಿ ರಾಜ್ಯಹೆದ್ದಾರಿ ತಡೆದು ಪ್ರತಿಭಟಿಸಿದರು.
‘ರೈತರ ಸಾಲ ಮನ್ನಾ ಮಾಡಬೇಕು. ರಾಷ್ಟ್ರೀಯ ವಿಪತ್ತು ಪರಿಹಾರ ಕೊಡಬೇಕು, ಕಲಬುರಗಿ ಜಿಲ್ಲೆಗೆ ₹1,000 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಬೆಳೆವಿಮೆ ಮಂಜೂರು ಮಾಡಬೇಕು,
ನದಿ ನೀರಿಗೆ ಜಲಾವೃತಗೊಂಡ ಜಮೀನುಗಳ ರೈತರಿಗೆ
₹1,000 ಕೋಟಿ ವಿಶೇಷ ಪ್ಯಾಕೇಜ್‌ಗೆ ಆಗ್ರಹ
ಶೀಘ್ರ ಬೆಳೆಹಾನಿ ಪರಿಹಾರ ನೀಡಿ
ನರೇಗಾ ಅಡಿ ಪ್ರವಾಹ ಪೀಡಿತ ಜಮೀನು ಅಭಿವೃದ್ಧಿ ಪಡಿಸಿ
ಶಾಶ್ವತ ಪರಿಹಾರ ಘೋಷಿಸಬೇಕು
ನರೇಗಾ ಯೋಜನೆಯಡಿ ರೈತರ ಜಮೀನು ಅಭಿವೃದ್ಧಿ ಪಡಿಸಬೇಕು.
ಮಳೆಗೆ ಹಾಳಾದ ವಿವಿಧ ರಸ್ತೆಗಳ ಸೇತುವೆ ದುರಸ್ತಿಗೊಳಿಸಿ ಮನೆಬಿದ್ದ ಬಡವರಿಗೆ ಪರಿಹಾರ ನೀಡಬೇಕು.
ಶಿಥಿಲಾವಸ್ಥೆಯ ಅಂಗನವಾಡಿ, ಶಾಲೆ, ಸರ್ಕಾರಿ ಕಚೇರಿ ದುರಸ್ತಿ ಮಾಡಬೇಕು.
ಅಗತ್ಯವಿದ್ದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು’
‘ಖಾಸಗಿ ಶಾಲಾ-ಕಾಲೇಜುಗಳಲ್ಲಿ ರೈತರ ಮಕ್ಕಳ 2ನೇ ಕಂತಿನ ಶುಲ್ಕ ಮನ್ನಾ ಮಾಡಬೇಕು.
ರೈತರ ಹೊಲಗಳ ಎತ್ತಿನಬಂಡಿಯ ದಾರಿ ಸುಗಮಗೊಳಿಸಬೇಕು.
ಕಬ್ಬು ಬೆಳೆಗಾರರಿಗೆ ಪರಿಹಾರ ಕೊಡಬೇಕು.
ಕಾಳಗಿ ತಾಲ್ಲೂಕಿನಲ್ಲಿ ಪಿಎಲ್‌ಡಿ, ಡಿಸಿಸಿ, ಎಪಿಎಂಸಿ, ಟಿಎಪಿಸಿಎಂಎಸ್ ಶಾಖೆ ಮಂಜೂರು ಮಾಡುವಂತೆ
ರಟಕಲ್ ಗೌರಿಗಣೇಶ ಗುಡ್ಡದ ರೇವಣಸಿದ್ದ ಶರಣರು, ಮುಖಂಡರು ಸೇರಿದಂತೆ ಪ್ರತಿಭಟನಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶರಣಬಸಪ್ಪ ಮಮಶೆಟ್ಟಿ, ಗೌತಮ ಪಾಟೀಲ್, ಮಲ್ಲಮ್ಮ ಮೊಘ, ವೀರಣ್ಣ ಗಂಗಾಣಿ, ಶಿವರಾಜ ಪಾಟೀಲ ಗೊಣಗಿ, ಸಿದ್ದಯ್ಯ ಮಠಪತಿ, ಗೌರಿಶಂಕರ ಸುರ್ವಾರ, ಮಲ್ಲು ಪಾಟೀಲ್, ಮಾರುತಿ ಗಂಜಗಿರಿ, ಪೃಥ್ವಿರಾಜ ನಾಮದಾರ, ರೇವಣಸಿದ್ಧ ನಾವದಗಿ, ಸಿದ್ದರಾಮಪ್ಪ ಪಾಟೀಲ್, ಭೀಮರಾಯ ಮಲಘಾಣ, ಭರತ ಬುಳ್ಳ, ಮೋಹನ ಚಿನ್ನಾ, ಲಿಂಗಬಸವ ಸೇಡಂ, ರೇವಣಸಿದ್ದ ಧರಿ, ವೀರಣ್ಣ ಸಿಗಿ, ಸಿದ್ದಪ್ಪ ಕಲಶೆಟ್ಟಿ, ಚಂದ್ರಕಾಂತ ಕುಂಬಾರ, ಶೇಖರ ಮಾನಶೆಟ್ಟಿ, ಅಣ್ಣಾರಾವ ಚಿಂಚೋಳಿ, ಪ್ರದೀಪ್ ಪಾಟೀಲ್, ಮಶಾಕ್ ಪಟೇಲ್, ಜಗನ್ನಾಥ್ ಅಲ್ಬ, ಸೋಮಶೇಖರ ಚಿಂಚೋಳಿ, ರೇವಣಸಿದ್ಧ ಮುತ್ತಪ್ಪಳ್ಳಿ, ಜಗ್ಗು ಸ್ವಾಮಿ, ಕಲ್ಲಪ್ಪ ಜಂಬುಗ, ಪ್ರಕಾಶ ಕೊಡದೂರ, ಶರಣಪ್ಪ ವಚ್ಚ, ಮಲ್ಲು ಹೂಗಾರ, ಸುತ್ತಮುತ್ತಲಿನ ಗ್ರಾಮಗಳಾದ ಕಲಗುರ್ತಿ, ರಾಯಕೋಡ, ಮತ್ತಿಮೋಡ ಗ್ರಾಮಗಳ ಅನೇಕರು ಭಾಗವಹಿಸಿದ್ದರು.
ತಹಶೀಲ್ದಾರ್ ಪೃಥ್ವಿರಾಜ ಪಾಟೀಲ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪಿಎಸ್‌ಐ ತಿಮ್ಮಯ್ಯ ಬಿ.ಕೆ ಬಂದೋಬಸ್ತ್ ಮಾಡಿದರು. ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.
ವರದಿ ಎಸ್. ವಿ. ಗಂಗಾಣಿ



















