ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಶ್ರೀ ತೇಜಸ್ವಿ ಸೂರ್ಯ ಅವರು ಇಂದು ಬೆಳಿಗ್ಗೆ ಬನಶಂಕರಿ 2ನೇ ಹಂತದ ಬೃಂದಾವನ ಉದ್ಯಾನವನದಲ್ಲಿ ಹಿರಿಯ ನಾಗರಿಕರಿಗಾಗಿ ಫಿಟ್ನೆಸ್ ಶಿಬಿರಕ್ಕೆ ಚಾಲನೆ ಮಾತನಾಡಿದರು.
ಪ್ರಾಣ್ ಹೆಲ್ತ್ ಸಹಯೋಗದೊಂದಿಗೆ ನಡೆಸಲಾಗುತ್ತಿರುವ ಈ ಶಿಬಿರದ ಮೂಲಕ ನಾವು ಹಿರಿಯ ನಾಗರಿಕರಿಗೆ, ಸಮತೋಲನ ಆಹಾರ, ಫಿಸಿಯೋಥೆರಪಿ ಮತ್ತು ಪೋಷಣೆ ಕುರಿತು ವೈಜ್ಞಾನಿಕ ವಿಧಾನಗಳ ಮೂಲಕ ತರಬೇತಿ ನೀಡುತ್ತಿದ್ದು, ಈ ತರಬೇತಿಗಳು ದೈಹಿಕ , ಮಾನಸಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ “ಫಿಟ್ ಇಂಡಿಯಾ” ಅಭಿಯಾನಕ್ಕೆ ಪೂರಕವಾಗಿ ಇವುಗಳನ್ನು ಯೋಜಿಸಲಾಗಿದ್ದು ಉದ್ಘಾಟನಾ ಸಂದರ್ಭದಲ್ಲಿ ಅನೇಕ ಹಿರಿಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿದ್ದು ನಮಗೆ ಸಂತಸ ತಂದಿದೆ ಎಂದು ಅವರು ಹಿರಿಯ ನಾಗರಿಕರ ಆಸಕ್ತಿಕರ ಬೆಳವಣಿಗೆಯನ್ನು ಶ್ಲಾಘಿಸಿದರು.
ಬೆಂಗಳೂರು ದಕ್ಷಿಣದ ವಿವಿಧೆಡೆಗಳಲ್ಲಿ ಈ ರೀತಿಯ ಶಿಬಿರಗಳನ್ನು ಆಯೋಜಿಸುವ ಅಭಿಲಾಷೆ ನಮ್ಮದಾಗಿದೆ ಎಂದು ಶ್ರೀ ತೇಜಸ್ವಿ ಸೂರ್ಯ ಅವರು ತಮ್ಮ ಮನದಾಳವನ್ನು ವ್ಯಕ್ತ ಪಡಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ



















