ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಳೆಯಲಿ ನಾ ನಿನ್ನ ಜೊತೆಯಲಿ

ಮಳೆಯೇ ನೀ ಸುರಿಯೇ
ತುಸು ಮೆಲ್ಲನೆ ಬೀಸು ಗಾಳಿಯೇ /

ಅವಳು ಬರುವ ದಾರಿಯಲಿ
ನೀ ತಾಕದಿರು ತಂಗಾಳಿಯೇ //

ಅರಿಷಿಣ ಮೈಯ ಹಳದಿಯ ಕಾಂತಿ
ಹಾಯದಿರು ನೀ ಸುಳಿಗಾಳಿಯೇ/

ಹೂಬಿಸಿಲು ಕೂಡ ನಾಚಿ ನೀರಾಗಲಿ 
ಹಗುರಾಗಿ ಸುರಿಯೇ ನೀ ಮಳೆಯೇ //

ಮಳೆಯಲಿ ನಾ ನಿನ್ನ ಜೊತೆಯಲಿ
ಕೊಡೆಯಾಗಿ ಬರುವೆ ನೀರೆಯೇ/

ಸಿಡಿಲಾಗಿ ಬರಲಿ ಮಿಂಚಾಗಿ ಬರಲಿ
ಕರಪಿಡಿದು ನಾ ನಡೆವೆ ಒಲುಮೆಯೇ //

ತಂಪಾಗಲಿ ಇಂಪಾಗಲಿ ಸಂಪಾಗಲಿ
ನಮ್ಮ ಪ್ರೇಮದುಸಿರು ಹಿತವಾಗಿರಲಿ /

ಓ…ಮೇಘಗಳೇ ಓಡದಿರಿ ನಿಲ್ಲಿರಿ
ನಮ್ಮ ಮಧುರ ಪ್ರೇಮ ಕಾವ್ಯವಾಗಲಿ//

ಬದುಕು ಬೆಳಕಾಗಲಿ ಅವಳ ನಡೆಯಲಿ
ಕಾರ್ಮೋಡ ಕವಿದು ಕತ್ತಲಾಗದಿರಲಿ /

ಬಿರುಸಾಗಿ ಜೋರಾಗಿ ಬಾರದಿರು ಮಳೆಯೇ
ಕರಗಿ ನೀರಾಗಿ ಹೋದಾಳು ಮನದರಸಿಯೇ //

  • ಹನುಮಂತರಾವ್ ಬಿ ನಾಗಪ್ಪಗೋಳ ಎಂ. ಎ, ಬಿ.ಈಡಿ  ಸಾಹಿತಿಗಳು ಗೋಕಾಕ 591307,
    ಮೊ. 7353438928.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!