ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜಕಾರಣಿಗಳಿಗೆ ಶಿಕ್ಷಕರ ಮನಸ್ಥಿತಿ ಅರ್ಥ ಆಗಲಿಲ್ಲ ಯಾಕೆ?

ಜಾತಿಗಣತಿಗೆ ಶಿಕ್ಷಕರನ್ನೇ ನೇಮಿಸಿದ್ದು ಯಾಕೆ? ಕಳಪೆ ರಾಜಕಾರಣಿಗಳಿಗೆ ತಮ್ಮ ಕುರ್ಚಿಯ ಬಗ್ಗೆ ಚಿಂತೆ ಇರುತ್ತದೆಯೇ ವಿನಃ ಅನ್ಯರ ಬಗ್ಗೆಯಲ್ಲ ಎಂಬ ಮಾತು ಜಾತಿಗಣತಿಯಲ್ಲಿ ಸ್ಪಷ್ಟವಾಗಿದೆ.
ತಮ್ಮ ಕುರ್ಚಿಯ ಉಳಿವಿಗಾಗಿ ಹಲವು ತಂತ್ರಗಳನ್ನು ಎಸಗುವ ರಾಜಕಾರಣಿಗಳು ಅನ್ಯರ ಮನಸ್ಥಿತಿಯ ಬಗ್ಗೆ ಯೋಚಿಸುವುದಿಲ್ಲ. ಯಾಕೆಂದರೆ ಅವರಿಗೆ ಈ ಸಮಾಜದ ಒಳಿತಿಗಿಂತ ಕುರ್ಚಿಯನ್ನು ಉಳಿಸಿಕೊಳ್ಳುವ ಉದ್ದೇಶವಿರುತ್ತದೆ.
“ಜಾತಿಗಣತಿಗೆ ಶಿಕ್ಷಕ/ಶಿಕ್ಷಕಿಯರನ್ನು ನೇಮಿಸಿದ್ದು ಈ ಸಮಾಜಕ್ಕೆ ದೊಡ್ಡ ಮಾರಕ.” ಇದರಿಂದ ಚಿಕ್ಕಮಕ್ಕಳ ಮನಸ್ಸಿನ ಮೇಲೆ ಹೇಗೆಲ್ಲ, ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ಯಾರೂ ಎಣಿಸಿಲ್ಲ. ಇದು ಊಹೆಗೂ ನಿಲುಕದು. “ ದೇಶದ ಭವಿಷ್ಯತ್ತು ತರಗತಿಯ ಕೋಣೆಯಲ್ಲಿ ರೂಪುಗೊಳ್ಳುತ್ತದೆ ” ಎಂದು ವಿದ್ವಾಂಸರು ಹೇಳಿದ್ದಾರೆ. ದೇಶದ ಭವಿಷ್ಯತ್ತು ರೂಪುಗೊಳ್ಳುವುದು ತರಗತಿಯಲ್ಲೇ ಇರಬಹುದು, ಆದರೆ ರೂಪಿಸುವ ಶಿಲ್ಪಿ ಬೋಧಕರಾಗಿರುತ್ತಾರೆ. ಈ ಸಂಗತಿಯನ್ನು ಕಳಪೆ ರಾಜಕಾರಣಿಗಳು ಮರೆತದ್ದು ಯಾಕೆ?
ಒಬ್ಬ ಶಿಕ್ಷಕ/ಶಿಕ್ಷಕಿಗೆ ಜಾತಿ ಧರ್ಮದ ಭೇದಭಾವವಿಲ್ಲದೆ ಎಲ್ಲಾ ಮಕ್ಕಳಲ್ಲಿಯೂ ಸಮಾನತೆಯ ಬೀಜ ಬಿತ್ತಿ ಹೆಮ್ಮರವಾಗಿಸುವ ಕನಸಿರುತ್ತದೆ. ಯಾವ ಶಿಕ್ಷಕ ಜಾತಿ ಧರ್ಮ ಎಣಿಸಬಾರದೆಂದು ಹೇಳಿರುತ್ತಾರೋ ಅವರೇ ಮನೆ ಮನೆಗೆ ಬಂದು ನಿಮ್ಮ ಧರ್ಮ ಯಾವುದು? ನಿಮ್ಮ ಜಾತಿ ಯಾವುದು? ಎಂದು ಕೇಳುವಂತಹ ಹೀನ ಸ್ಥಿತಿ ಬಂದಿದೆ. ಮನೆ ಮನೆಗೂ ಬಂದು ಶಿಕ್ಷಕರು ಜಾತಿ ಕೇಳುವಾಗ, ಮನೆಯಲ್ಲಿರುವ ಸಣ್ಣ ಮಗು: “ ತರಗತಿಯಲ್ಲಿ ಪಾಠ ಮಾಡುವಾಗ ಧರ್ಮ ಜಾತಿಗಳನ್ನು ಕೇಳಬಾರದು ಮತ್ತು ಎಣಿಸಬಾರದೆಂದು ನೀವೇ ಹೇಳಿದ್ದೀರಲ್ಲ? ಈಗ ನೀವೇ ಕೇಳುತ್ತಿರುವುದು ನ್ಯಾಯವೇ? ” ಎಂದು ಪ್ರಶ್ನಿಸಿದರೆ ಆ ಶಿಕ್ಷಕರ ಮನಸ್ಥಿತಿ ಹೇಗಿರಬೇಕು. ತರಗತಿಯಲ್ಲಿ ತಾನೇ ಸಮಾನತೆಯನ್ನು ಸಾರಿ ಈಗ ತಾನೇ ನಿಮ್ಮ ಧರ್ಮ ಯಾವುದು? ನಿಮ್ಮ ಜಾತಿ ಯಾವುದು? ಎಂದು ಧ್ವನಿ ಉಚ್ಚರಿಸುವಾಗ ಆ ಶಿಕ್ಷಕರಿಗೆ ಎಷ್ಟರ ಮಟ್ಟಿಗೆ ಮನೋಬೇನೆಯಾಗಬಹುದು ಯೋಚಿಸಿ.
ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಸಮಾನತೆ ಸಾರಿದ ಶಿಕ್ಷಕರೇ ತಮ್ಮ ವಿದ್ಯಾರ್ಥಿಗಳ ಮನೆಗೆ ಹೋಗಿ ಜಾತಿ ಕೇಳಬೇಕಾದ ಪರಿಸ್ಥಿತಿ ಬಂದಿದೆ. ಇಂತಹ ಹೀನಾಯ ಸ್ಥಿತಿ ಶಿಕ್ಷಕರಿಗೆ ಬರಬಾರದಿತ್ತು. ಇದರ ಪರಿಣಾಮ ದೇಶದ ಭವಿಷ್ಯತ್ತಿನ ಮೇಲಾಗುತ್ತದೆ. “ತರಗತಿಯಲ್ಲಿ ಸಮಾನತೆ ಸಾರಿ, ಮನೆ ಮನೆಗೆ ಅವರೇ ಬಂದು ಜಾತಿ ಕೇಳುತ್ತಾರೆ. ಸಮಾನತೆ ಎಂಬುದು ತರಗತಿಗಷ್ಟೇ ಸೀಮಿತ.” ಎಂದು ಬೆಳೆಯುವ ಮಕ್ಕಳು ನಿರ್ಧರಿಸುವುದಿಲ್ಲವೇ? ಜಾತಿ ಧರ್ಮಗಳನ್ನು ಮೆಟ್ಟಿ ನಿಂತು, ಸಮ ಸಮಾಜವನ್ನು ನಿರ್ಮಾಣ ಮಾಡಬೇಕಾದ ಶಿಕ್ಷಕರಿಂದಲೇ ಜಾತಿಗಣತಿ ನಡೆದ ಮೇಲೆ ಜಾತಿಯೆಂಬ ಮಹಾ ಮಾರಿ ಇನ್ನೆಲ್ಲಿ ನಶಿಸಲು ಸಾಧ್ಯ?
ರಾಜಕಾರಣಿಗಳಿಗೆ ಪ್ರತಿಯೊಂದು ಕಾರ್ಯದಿಂದ ಬರುವ ಲಾಭ ಮತ್ತು ಕುರ್ಚಿ ಉಳಿಸಿಕೊಳ್ಳುವ ಉದ್ದೇಶ ಇರುತ್ತದೆ, ಆದರೆ ಶಿಕ್ಷಕರಿಗೆ ಇಂತಹ ಉದ್ದೇಶ ಇರುವುದಿಲ್ಲ. ಶಿಕ್ಷಕರು ಸಮಾನತೆಯ ಪ್ರತಿರೂಪ. ಇಂತಹ ಶಿಕ್ಷಕರಿಂದಲೇ ಜಾತಿ ಗಣತಿ ನಡೆಯುವುದು ಸಮಾಜಕ್ಕೆ ಮಾರಕ. ಶಿಕ್ಷಕರೇ ಇದನ್ನು ವಿರೋಧಿಸಿ ನಿಮ್ಮ ಆತ್ಮಗೌರವವನ್ನು ಉಳಿಸಿಕೊಳ್ಳಿ. ಜಾತಿ ಗಣತಿಗೆ ಬೇಕಾದರೆ ಅನ್ಯರನ್ನು ನೇಮಿಸಿಕೊಳ್ಳಲಿ. ಸಾಮಾನ್ಯ ಜನರು ಇದನ್ನು ವಿರೋಧಿಸಬೇಕಾಗಿದೆ. ನಾವು ಪುಕ್ಕಟ್ಟೆ ಬರುವ ಭಾಗ್ಯಗಳಿಗೆ ಜೋತು ಬಿದ್ದೆವೇ ವಿನಃ ನಮ್ಮ ರಾಜ್ಯದ ಏಳಿಗೆಯ ಬಗ್ಗೆ ಯೋಚಿಸಲಿಲ್ಲ. ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ ಶಿಲ್ಪಿಗಳಿಂದ ಜಾತಿಗಣತಿ ಮಾಡಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ? ಸಾಮಾನ್ಯ ಜನರು ಇದರ ಬಗ್ಗೆ ಎಚ್ಚೆತ್ತುಕೊಂಡು ವಿರೋಧಿಸಬೇಕಾಗಿದೆ.

  • ರಾಮಕೃಷ್ಣ. ಎನ್.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!