ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

24ನೇ ಕಲ್ಯಾಣ ಪರ್ವ ಉತ್ಸವಕ್ಕೆ ಸಕಲ ರೀತಿ ಸಿದ್ದತೆ

ಮನುಕುಲದ ಉದ್ಧಾರಕ, ಸತ್ಯ ತತ್ವದ ಪ್ರತಿಪಾದಕ, ಶರಣ ಗಣಮೇಳದ ರೂವಾರಿ ಅಣ್ಣ ಬಸವಣ್ಣನವರು ಹಾಗೂ ಶರಣರು ಮೆಟ್ಟಿದ ಧರೆ ಪಾವನ ಭೂಮಿ ಬಸವಕಲ್ಯಾಣದ ಬಸವೇಶ್ವರ ಪ್ರತಿಮೆಯ ಬಸವ ಪೀಠದ ಮಹಾಮನೆಯ ಆವರಣದಲ್ಲಿ 24ನೇ ಕಲ್ಯಾಣ ಪರ್ವ ಕಾರ್ಯಕ್ರಮ ಆಚರಣೆಗೆ ಬಸವಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಅಂದು ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ಗಣ ಪರ್ವಗಳು ನಡೆಯುತ್ತಿದ್ದವು. ಕಲ್ಯಾಣದ ಕ್ರಾಂತಿಯ ನಂತರ ಸಂಪೂರ್ಣವಾಗಿ ಗಣ ಪರ್ವ ನಿಂತಿದ್ದವು. ಮತ್ತೆ 21ನೇ ಶತಮಾನದಲ್ಲಿ ಕಲ್ಯಾಣ ಪರ್ವದ ಮೂಲಕ ಗಣ ಪರ್ವಗಳು ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಲಿಂ. ಮಾತಾಜಿಯ ನೇತೃತ್ವದಲ್ಲಿ ಪ್ರಾರಂಭವಾಗಿವೆ. ಮಾತಾಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ಅನೇಕ ವೈಜ್ಞಾನಿಕ ಮತ್ತು ವೈಚಾರಿಕ ಚಟುವಟಿಕೆಗಳು ಸಧ್ಯ ನಿತ್ಯ ನಿರಂತರವಾಗಿ ಬಸವ ಧರ್ಮ ಪೀಠದಲ್ಲಿ ನಡೆಯುತ್ತಿವೆ. ಪೂಜ್ಯ ಗಂಗಾ ಮಾತಾಜಿಯವರ ಅಧ್ಯಕ್ಷತೆಯಲ್ಲಿ ಹಾಗೂ ಪರಮ ಪೂಜ್ಯ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಗಳವರ
ನೇತೃತ್ವದಲ್ಲಿ 24ನೇ ಕಲ್ಯಾಣ ಪರ್ವ ಸಕಲ ರೀತಿಯಲ್ಲಿ ಸಿಂಗಾರಗೊಂಡು, ಸಜ್ಜಾಗಿದೆ.

ಇದೆ ತಿಂಗಳು 10,11,12ರ ಈ ಮೂರು ದಿವಸಗಳ ಕಾಲ ಅತ್ಯಂತ ಶಿಸ್ತು ಬದ್ಧವಾಗಿ, ಅರ್ಥಪೂರ್ಣವಾಗಿ, ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಿನ ನೆಲೆಯಲ್ಲಿ ಉತ್ಸವವು ಜರುಗಲಿದ್ದು. ಕಲ್ಯಾಣ ಪರ್ವಕ್ಕೆ ಕರ್ನಾಟಕ, ತೆಲಂಗಾಣ ಮಹಾರಾಷ್ಟ್ರ, ತಮಿಳುನಾಡು, ಗೋವಾ ಸೇರಿದಂತೆ ಮೊದಲಾದ ರಾಜ್ಯಗಳಿಂದ ಸಾವಿರಾರು ಶರಣ ಬಂಧುಗಳು ಭಾವಹಿಸಲಿದ್ದಾರೆ. ಈ ಮೂರು ದಿವಸಗಳ ಕಾಲ ಯೋಗ , ಇಷ್ಟಲಿಂಗ ಪೂಜೆ, ಪ್ರಾರ್ಥನೆ, ಶರಣ ಸ್ಮರಣೆ, ಧರ್ಮಚಿಂತನೆ, ವಿಚಾರಗೋಷ್ಟಿ, ವಚನ ಸಂಗೀತ, ವಚನ ನೃತ್ಯ ,ಪೀಠಾರೋಹಣ, ಪಥ ಸಂಚಲನ, ಪ್ರಶಸ್ತಿ ಪ್ರದಾನ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳು ನೆರವೇರಲಿವೆ.

108 ಅಡಿ ಎತ್ತರದ ಪ್ರತಿಮೆ :

ವಿಶ್ವಗುರು ಬಸವಣ್ಣನವರ 108 ಅಡಿ ಎತ್ತರದ ಪ್ರತಿಮೆಯನ್ನು 2001ರಲ್ಲಿ ನಿರ್ಮಿಸಿದ ಕೀರ್ತಿ ಮಾತಾಜಿಯವರಿಗೆ ಸಲ್ಲುತ್ತದೆ. ಕುಳಿತ ಭಂಗಿಯಲ್ಲಿರುವ ಬಸವಣ್ಣನವರ ಹಸನ್ಮುಖಿಯ ಈ ಪ್ರತಿಮೆ ಬಸವಾಭಿಮಾನಿಗಳಿಗೆ ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದ್ದು, ಪ್ರಮುಖ ಧಾರ್ಮಿಕ, ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಜಗತ್ತಿನ ಜನ, ಮತ್ತೆ ಕಲ್ಯಾಣಕ್ಕೆ ಬಂದು ನೋಡುವಂತಾಗಿದೆ. ಅದಕ್ಕಾಗಿ
ಕಲ್ಯಾಣದಲ್ಲಿ ಜರುಗುತ್ತಿರುವ ಕಲ್ಯಾಣ ಪರ್ವ ಕಾರ್ಯಕ್ರಮದ ಮೂಲಕ ಬಸವಾದಿ ಶರಣರ ಸಂದೇಶವನ್ನು ನಾಡಿನ ಉದ್ಧಕ್ಕೂ ಪಸರಿಸುವ ಕಾರ್ಯ ರಾಷ್ಟ್ರೀಯ ಬಸವದಳ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಜನಸಾಮಾನ್ಯರಿಗೆ ಬಸವ ತತ್ವದ ಜಾಗೃತಿ ಮೂಡಿಸುತ್ತಿರುವ ಕಾರ್ಯ ಅನನ್ಯವಾದದ್ದು. ಮಹಾ ಮಾನವತಾವಾದಿ ಬಸವಣ್ಣನವರ ವಚನ ಸಾಹಿತ್ಯದ ಸಂದೇಶಗಳಲ್ಲಿ ನಂಬಿಕೆ ಇಟ್ಟು ಬದುಕುವ ಸಮಸ್ತ ಬಸವಭಕ್ತರು, ಬಸವ ತತ್ವಾಭಿಮಾನಿಗಳೆಲ್ಲರೂ ವರ್ಷಕ್ಕೆ ಒಮ್ಮೆಯಾದರೂ ಕಲ್ಯಾಣ ಪರ್ವಕ್ಕೆ ಬಂದು ಧನ್ಯರಾಗಬೇಕಾಗಿದೆ.

ಆದರದ ಸ್ವಾಗತ :

ಜೀವನಕ್ಕೆ ಬೇಕಾಗುವ ಮೌಲ್ಯಾಧಾರಿತ ಸಿದ್ಧಾಂತಗಳು ಬಸವಾದಿ ಶರಣರ ವಚನಗಳಲ್ಲಿ ಅಡಗಿವೆ.ಇಂತಹ ವಚನಗಳಲ್ಲಿ ಅಡಗಿರುವ ಮಾನವೀಯ ಮೌಲ್ಯಗಳು ಜನರಿಗೆ ತಿಳಿಸುವ ಕಾರ್ಯ ಈ ಪರ್ವದಲ್ಲಿ ಆಗುತ್ತಿರುವುದು ಉತ್ತಮ ಬೆಳವಣಿಗೆ. ವಚನ ಸಾಹಿತ್ಯವು ಲಿಂಗಾಯತ ಧರ್ಮದ ಪವಿತ್ರ ಗ್ರಂಥವಾಗಿದೆ. ಕೂಡಲಸಂಗಮ ಮತ್ತು ಬಸವಕಲ್ಯಾಣ ಕ್ಷೇತ್ರಗಳು ಮಾನವೀಯ ಸಮಾನತೆ ಸಾರಿದ ಪುಣ್ಯಕ್ಷೇತ್ರಗಳಾಗಿವೆ‌. ಲಿಂಗಾಯತರು ಒಮ್ಮೆಯಾದರೂ ಈ ಸ್ಥಳಗಳಿಗೆ ಭೇಟಿ ನೀಡಬೇಕು, ಭೇಟಿ ನೀಡಿದಾಗಲೇ ನಮ್ಮ ಜೀವನ ಪಾವನವಾಗುತ್ತದೆ. ಈ ಪವಿತ್ರ ಕಲ್ಯಾಣ ಪರ್ವ ಸಮಾವೇಶಕ್ಕೆ ಜಾತಿ ಮತ ಪಂಥಗಳ ಭೇದವಿಲ್ಲದೆ, ಸರ್ವರಿಗೂ ಆದರದ ಸ್ವಾಗತವಿದೆ.

ಆಶಯ ಮಾತು – ಬಸವಾಭಿಮಾನಿಗಳ ದೇಹದಲ್ಲಿ ಜೀವ ಇರುವವರೆಗೂ ಒಮ್ಮೆಯಾದರೂ ಕಲ್ಯಾಣ ಪರ್ವ ಉತ್ಸವದಲ್ಲಿ ಭಾಗಿಯಾಗಿ ಪಾವನರಾಗಬೇಕು.

ಲೇಖಕರು – ಸಂಗಮೇಶ ಎನ್ ಜವಾದಿ.
ಸಾಹಿತಿ, ಪತ್ರಕರ್ತರು, ಪರಿಸರ ಸಂರಕ್ಷಕರು.
ಅಧ್ಯಕ್ಷರು, ಕಲ್ಯಾಣ ಪರ್ವ ಪ್ರಚಾರ ಸಮಿತಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!