
ರಾಮನಗರ : ಕೆಲವೇ ದಿನಗಳ ಹಿಂದೆ ಶುರುವಾಗಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋಗೆ ದೊಡ್ಡ ಸಂಕಷ್ಟ ಎದುರಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದು, ಸ್ಟುಡಿಯೋಗೆ ಬೀಗ ಹಾಕಲಾಗಿದೆ. ರಾಮನಗರ ತಹಶೀಲ್ದರ್ ತೇಜಸ್ವಿನಿ ಅವರ ಜೊತೆ ಅಧಿಕಾರಿಗಳು ತೆರಳಿ ಬೀಗ ಹಾಕಿದ್ದಾರೆ.
ಬಿಗ್ ಬಾಸ್ ಮನೆಗೆ ದೊಡ್ಡ ಸಂಕಷ್ಟ ಎದುರಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ನೋಟಿಸ್ ಅನ್ನು ಜಾಲಿವುಡ್ ಮಾನೇಜ್ಮೆಂಟ್ ಸ್ವೀಕರಿಸಿದೆ. ಸ್ಟುಡಿಯೋದಿಂದ ಜನರನ್ನು ಕಳುಹಿಸುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ. ಅದಕ್ಕಾಗಿ ಸಂಜೆ 7.30ರವರೆಗೆ ಸಮಯ ನೀಡಲಾಗಿತ್ತು, ಬಿಗ್ ಬಾಸ್ ಮನೆಯಿಂದ ಹೊರ ಬಂದು ಕಾರ್‌ನಲ್ಲಿ ಹೊರಟ ಸ್ಪರ್ಧಿಗಳು ಬಿಗ್ ಬಾಸ್ ಸ್ಪರ್ಧಿಗಳು ಮನೆಯಿಂದ ಹೊರ ಬಂದು ವಾಹಿನಿಯಿಂದ ವ್ಯವಸ್ಥೆ ಮಾಡಿ ಕಾರ್‌ಗಳಲ್ಲಿ ಸ್ಟೂಡಿಯೋದಿಂದ ಹೊರಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೇರೆ ಸ್ಟುಡಿಯೋದಲ್ಲಿ ಶೂಟಿಂಗ್?
ಸಂಜೆಯ ನಂತರ ಥಿಯೇಟರ್ ನಿಂದ ಸ್ಪರ್ಧಿಗಳೆಲ್ಲರನ್ನೂ ಹೋಟೆಲೊಂದಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ಒಂದರೆಡು ದಿನ ಸ್ಪರ್ಧಿಗಳು ಉಳಿಯಲಿದ್ದಾರೆ. ಬೇರೆ ಸ್ಟುಡಿಯೋದಲ್ಲಿ ಬಿಗ್ ಶೂಟಿಂಗ್ ಮುಂದುವರಿಸಲು ಅದರ ನಿರ್ಮಾಣ ಸಂಸ್ಥೆ ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ ಕೆಲವು ಸ್ಟುಡಿಯೋಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ತ್ವರಿತವಾಗಿ ಬೇರೆ ಸ್ಟುಡಿಯೋದಲ್ಲಿ ಸೆಟ್ ಹಾಕಿ ಬಿಗ್ ಬಾಗ್ ಮುಂದುವರಿಸುವ ಸಾಧ್ಯತೆಗಳಿವೆ.
ವರದಿ : ಜಿಲಾನಸಾಬ್ ಬಡಿಗೇರ್



















