ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಪುರಾಣ ಪ್ರಾರಂಭೋತ್ಸವ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿಯ ಲಿಂ. ಶ್ರೀ ವಿಜಯ ಮಹಾಂತ ಶಿವಯೋಗಿಗಳವರ ಮೂಲಮಠ ಚಿತ್ತರಗಿಯಲ್ಲಿ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ -07-10-2025 ಮಂಗಳವಾರದಿಂದ ಪ್ರಾರಂಭಗೊಂಡು ದಿನಾಂಕ -05-11-2025 ರವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಜರುಗಲಿದೆ. ಲಿಂಗೈಕ್ಯ ಅಥಣಿಯ ಶ್ರೀ ಮ.ನಿ. ಪ್ರ. ಮುರುಗೇಂದ್ರ ಮಹಾಸ್ವಾಮಿಗಳು ಅವರ ಜೀವನ ಚರಿತ್ರೆ ಆಧರಿಸಿ ಪ್ರವಚನ ನಡೆಯಲಿದೆ.
ಕಾರ್ಯಕ್ರಮದ ಲಿಂ. ಶ್ರೀ ಮ. ನಿ ಪ್ರ ಡಾ. ಮಹಾಂತ ಸ್ವಾಮಿಗಳು ಸಂಸ್ಥಾನ ಮಠ ಚಿತ್ತರಗಿ ಅವರ ಕೃಪಾ ಆಶೀರ್ವಾದದಿಂದ ಚಿತ್ತರಗಿ ಮೂಲಮಠದ ಗುರು ಮಹಾಂತ ಮಹಾಸ್ವಾಮಿಗಳು ನೇತೃತ್ವಯಿಸುವರು ಹಡಗಲಿ ನಿಡಗುಂದಿಯ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಶಿರೂರಿನ ಮಹಾಂತ ತೀರ್ಥದ ಮ. ನಿ.ಪ್ರ ಬಸವಲಿಂಗ ಮಹಾಸ್ವಾಮಿಗಳು ಹರನಾಳದ ಮ. ನಿ. ಪ್ರ ಸಂಗಡ ಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು ಪುರಾಣ ಪ್ರವಚನವನ್ನು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಿಣೇ ವಾರ ಗ್ರಾಮದ ಪೂಜ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಪುರಾಣ ಪ್ರವಚನ ನಡೆಸಿಕೊಡಲಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವಂದಾಲಿ ಗ್ರಾಮದ ಗಾನಯೋಗಿ ಪಂಡಿತ ಡಾ : ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ಶಶಿಧರ್ ಹಿರೇಮಠ ವಚನ ಸಂಗೀತ ನಡೆಸಿಕೊಡಲಿದ್ದಾರೆ ಉಮಳಿ ಹೊಸೂರುದ ಶ್ರೀಮಲ್ಲಿಕಾರ್ಜುನ್ ಗೌಡ ತಬಲಾ ಸಾತ್ ನೀಡಲಿದ್ದಾರೆ ಚಿತ್ತರಗಿಯ ಶ್ರೀ ರಾಚ ಪ್ಪ ಮಾನಪ್ಪ ಬಡಿಗೇರ್ ಹಾರ್ಮೋನಿಯಂ ನುಡಿಸುವರು.ಯಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರು ಶ್ರೀ ಶಿವಕುಮಾರ ಗಂಗಾಧರ ಶಾಸ್ತ್ರಿಗಳು ಹಿರೇಮಠ ಚಿತ್ತರಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಹಾಗೂ ಶಾಖ ಮಠದ ಎಲ್ಲಾ ಸದ್ಭಕ್ತರು ಬಂದು ಪಾಲ್ಗೊಂಡು ವಿಜಯ ಮಹಾಂತ ಶಿವಯೋಗಿಗಳ ಕೃಪೆಗೆ ಪಾತ್ರರಾಗಬೇಕೆಂದು ಯಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಶಿವಕುಮಾರ ಗಂಗಾಧರ ಶಾಸ್ತ್ರಿಗಳು ಹಿರೇಮಠ ಚಿತ್ತರಗಿ ಹಾಗೂ ಸರ್ವ ಸದಸ್ಯರು ಚಿತ್ತರಗಿ ತಾಲೂಕ್ ಹುನಗುಂದ ಜಿಲ್ಲಾ. ಬಾಗಲಕೋಟೆ ಇವರು ಪ್ರಕಟಣೆಯಲ್ಲಿ ಕೋರಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!