ಬಳ್ಳಾರಿ / ಕಂಪ್ಲಿ : ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಹಿಂಬದಿಯಲ್ಲಿರುವ ಗೃಹ ರಕ್ಷಕದಳ ಕಚೇರಿಯಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ವವಾಗಿ ಆಚರಿಸಿದರು.
ಗೃಹ ರಕ್ಷಕದಳ ಘಟಕಾಧಿಕಾರಿ ಎಚ್.ಹೊನ್ನುರುವಲಿ ಸಾಬ್ ಮಾತನಾಡಿ, ವಾಲ್ಮೀಕಿ ಮಹರ್ಷಿಯವರ ರಾಮಾಯಣವು ಭಾರತೀಯ ಶ್ರೇಷ್ಠ ಜೀವನ ಪದ್ಧತಿಯ ಪ್ರತೀಕವಾಗಿದೆ. ಪರಮ ಪವಿತ್ರವಾದ ರಾಮಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ವಾಲ್ಮೀಕಿ ಮಹರ್ಷಿಗಳ ತತ್ವ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಸೆಕ್ಷನ್ ಲೀಡರ್ ಬಿ.ಚಂದ್ರಶೇಖರ, ಸಿಬ್ಬಂದಿಗಳಾದ ಗೋಪಿನಾಥ ಬಿ, ಜಯಪ್ರಕಾಶ್ ಕೆ, ಸೂಗುರೇಶ್ವರ, ಹನುಮಂತ ಮತ್ತು ಬಿ.ರಾಜಶೇಖರ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















