ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲೂ ಬಹಳ ಸಡಗರ ಸಂಭ್ರಮ ದಿಂದ ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿಯವರು ಎಲ್ಲರೂ ಮೆಚ್ಚುವಂತಹ ಕಾವ್ಯ,
ರಾಮಾಯಣವನ್ನು ಬರೆದು ಜಗತ್ಪ್ರಸಿದ್ದರಾಗಿದ್ದು ಈಗ ಇತಿಹಾಸ, ರಾಮಾಯಣ ಮಹಾಕಾವ್ಯದ ನೀತಿಯ ಮಾತುಗಳನ್ನು ನಾವೆಲ್ಲರೂ ಅನುಸರಿಸಬೇಕಾಗಿದೆ, ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಲಮಾಣಿ ಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಡಾ. ಹುಲಿಗೆಮ್ಮ, ಡಾ. ಪ್ರದೀಪ ಕುಮಾರ್ ಯು,
ಡಾ. ಮಲ್ಲಿಕಾರ್ಜುನ, ಡಾ. ನರಸಿಂಹ, ಶುಭಾ ಮತ್ತು ಅತಿಥಿ ಉಪನ್ಯಾಸಕರಾದ ಡಾ. ಪ್ರಕಾಶ ಹುಲ್ಲೂರು, ಶಿವಪ್ರಸಾದ್ ಹಾದಿಮನಿ, ಬೋಧಕೇತರ ಸಿಬ್ಬಂದಿ ಗಳಾದ, ಹನುಮಪ್ಪ ಮೇಟಿ, ತಾರಮ್ಮ, ಲಕ್ಷ್ಮಿ
ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..
ಆರಂಭದಲ್ಲಿ ಪ್ರಾಂಶುಪಾಲರಾದಿಯಾಗಿ ಎಲ್ಲಾ ಪ್ರಾಧ್ಯಾಪಕರು ಮಹರ್ಷಿ ವಾಲ್ಮೀಕಿಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯಶಸ್ವಿಯಾಗಿ ನೆರವೇರಿಸಲಾಯಿತು.
- ಕರುನಾಡ ಕಂದ




















