ಹನೂರು: ತಾಲೂಕಿನ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಗೆ ಡಿಲವರಿ ಪಾಯಿಂಟ್ ಬಳಿ 2,5 ಕೋಟಿ ರೂ ವೆಚ್ಚದಲ್ಲಿ 1.45 ಕಿ ಮೀ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದ ಅವರು ದಶಕಗಳ ಬೇಡಿಕೆ ಈಡೇರಿಕೆಗೆ ರಾಮನ ಗುಡ್ಡ ಕೆರೆಗೆ ಏತ ನೀರಾವರಿ ಮೂಲಕ ನದಿಯಿಂದ ನೀರು ತುಂಬಿಸುವ ಯೋಜನೆ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಲಾಗಿದೆ ಒಂದು ತಿಂಗಳಲ್ಲಿ ಕಾಮಗಾರಿ ಮುಗಿದು ನದಿಯಿಂದ ನೀರು ಹರಿಸಲು ಕ್ರಮ ವಹಿಸಲಾಗಿದೆ ಹೀಗಾಗಿ ದಶಕಗಳ ಬೇಡಿಕೆ ಈ ಭಾಗದ ರೈತರ ಬದುಕು ಹಸನುಗೊಳಿಸಲು ಚಿಂಚಳ್ಳಿ ಮಣಗಳ್ಳಿ ಬಂಡಳ್ಳಿ ತೊಮಿಯಾರ್ ಪಾಳ್ಯ ಹಾಗೂ ಕೆವಿಎನ್ ದೊಡ್ಡಿ ಎಂಟಿ ದೊಡ್ಡಿ ಸೇರಿದಂತೆ ರಾಮನಗುಡ್ಡ ಅಚ್ಚುಕಟ್ಟು ಪ್ರದೇಶದ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿರುವ ತೋಡುಬಾವಿ ಹಾಗೂ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚುವ ನಿಟ್ಟಿನಲ್ಲಿ ಜೊತೆಗೆ ಈ ಭಾಗದಲ್ಲಿ ಹಲವಾರು ವರ್ಷಗಳ ಬಹು ಬೇಡಿಕೆಯ ರೈತರ ಕನಸು ನನಸಾಗಲು ಇಂದು ಪೈಪ್ಲೈನ್ ಕಾಮಗಾರಿಗೆ ಚಾಲನೆ ನೀಡಲಾಗಿದೆ ಮುಂದೆ ನಿನ್ನಷ್ಟು ಕೆಲಸ ಕಾರ್ಯಗಳನ್ನು ಮಾಡಲು ಸಂಪೂರ್ಣ ರೈತರ ಹಾಗೂ ಕ್ಷೇತ್ರದ ಜನತೆಯ ಹೆಚ್ಚಿನ ಸಹಕಾರ ನೀಡುವುದರ ಮೂಲಕ ಇರುವಷ್ಟು ಕೆರೆಕಟ್ಟೆಗಳಿಗೆ ಕಾಲುವೆಗಳಿಗೆ ನೀರು ಹರಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಮಾತನಾಡಿ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಈ ಹಿಂದೆ ಕ್ಷೇತ್ರವನ್ನು ಆಳಿದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇಲ್ಲಿನ ಕ್ಷೇತ್ರದ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಂದಾಗದೆ ಕಾವೇರಿ ನದಿಯಲ್ಲಿ ಮಳೆಗಾಲದಲ್ಲಿ ತುಂಬಿ ಹರಿದು ತಮಿಳುನಾಡಿನ ಮೂಲಕ ಸಮುದ್ರಕ್ಕೆ ನೀರು ಹರಿದು ಹೋಗುತ್ತಿದೆ ಹೀಗಾಗಿ ಕ್ಷೇತ್ರದ ಶಾಸಕರು ಉತ್ತಮ ಕೆಲಸ ಮಾಡುವ ಮೂಲಕ ಕ್ಷೇತ್ರದಲ್ಲಿ ಇರುವಷ್ಟು ಕೆರೆಕಟ್ಟೆಗಳಿಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿದ್ದು ಶಾಸಕರ ಕೆಲಸ ಕಾರ್ಯಗಳು ಉತ್ತಮವಾಗಿ ಕ್ಷೇತ್ರದಲ್ಲಿ ಮಾಡುತ್ತಿದ್ದಾರೆ ಹೀಗಾಗಿ ರೈತ ಸಂಘಟನೆಯ ಸಹ ಅವರಿಗೆ ಪೂರಕವಾಗಿ ಸ್ಪಂದಿಸುತ್ತದೆ ಅಧಿಕಾರಿಗಳು ಸಹ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಮೂಲಕ ಕ್ಷೇತ್ರದ ಜನತೆಯ ಕೆಲಸ ಕಾರ್ಯಗಳಿಗೆ ಸ್ಪಂದಿಸಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಗೌಡೆ ಗೌಡ ಮಾತನಾಡಿ ಶಾಸಕ ಎಂಆರ್ ಮಂಜುನಾಥ್ ಕ್ಷೇತ್ರದ ಮತದಾರರು ಅಲ್ಲದೆ ಇದ್ದರೂ ಕ್ಷೇತ್ರಕ್ಕೆ ಬಂದು ಜನರ ಆಶೀರ್ವಾದದಿಂದ ಶಾಸಕರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಈ ಹಿಂದೆ ಕೆಲಸಕಾರ್ಯಗಳು ಆಗದೆ ಇರುವ ಕೆಲಸ ಕಾರ್ಯಗಳನ್ನು ಶಾಸಕರು ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಂಡು ನದಿಯಿಂದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ ಉಳಿದಂತ ಕೆರೆಕಟ್ಟೆಗಳಿಗೂ ಶಾಸಕರು ನೀರು ತುಂಬಿಸುವ ಮೂಲಕ ಕ್ಷೇತ್ರದ ಜನತೆಯ ಬಹು ಬೇಡಿಕೆಯ ನೀರಾವರಿ ಯೋಜನೆಗಳಿಗೆ ಅನುಕೂಲ ಕಲ್ಪಿಸಬೇಕು ರೈತ ಸಂಘ ಸಹ ಅವರ ಕೆಲಸ ಕಾರ್ಯಗಳಿಗೆ ಪೂರಕವಾಗಿ ಸ್ಪಂದಿಸುತ್ತದೆ ಎಂದರು.
ಇದೇ ವೇಳೆಯಲ್ಲಿ ಕಬಿನಿ ನಾಲಾ ವೃತ್ತ ಇಂಜಿನಿಯರ್ ಮಹೇಶ್ ಕೊಳ್ಳೇಗಾಲ ಕಾವೇರಿ ನೀರಾವರಿ ನಿಗಮದ ಎ ಇ ಇ ಉಮೇಶ್ ಎ ಇ ಕರುಣಮಯಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಹಾಗೂ ರೈತ ಮುಖಂಡರು ಚಿಂಚಳ್ಳಿ ರಾಮನಗುಡ್ಡ ಸುತ್ತಮುತ್ತಲಿನ ರೈತ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ :ಉಸ್ಮಾನ್ ಖಾನ್



















