ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಸಡಗರ ಸಂಭ್ರಮದಿಂದ ಸೋಮವಾರ ಆಚರಿಸಲಾಯಿತು.
ಇಲ್ಲಿನ ಎದುರು ಬಸವಣ್ಣದಿಂದ ಆರಂಭಗೊಂಡ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ದ್ಯಾವಮ್ಮ ಗುಡಿವರೆಗೆ ತೆರಳಿ, ತದ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳ್ಳದ ಬಳಿಯಲ್ಲಿರುವ ವಾಲ್ಮೀಕಿ ಪುತ್ಥಳಿಯಲ್ಲಿ ಸಮಾವೇಶಗೊಂಡಿತು. ಸುಮಂಗಲಿಯರ ಕುಂಭ, ಕಳಸ, ತಾಷಾರಾಂಡೋಲ್, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು. ಸೋಮಲಾಪುರ ಹಗಲುವೇಷಧಾರಿಗಳ ತಂಡದ ಪ್ರದರ್ಶನ ಮೆರವಣಿಗೆ ಮೆರಗು ನೀಡುವ ಜೊತೆಗೆ ಜನರ ಆಕರ್ಷಣೆಗೆ ಪಾತ್ರರಾದರು. ಮೆರವಣಿಗೆಯುದ್ದಕ್ಕೂ ಯುವಕರು ಕುಣಿದು ಸಂಭ್ರಮಿಸಿದರು.
ತದ ನಂತರ ಗ್ರಾ. ಪಂ. ಸದಸ್ಯ ನಾಯಕರ ವೆಂಕೋಬ ಮಾತನಾಡಿ, ರಾಮಾಯಣ ಮಹಾಕಾವ್ಯದ ಮೂಲಕ ವಾಲ್ಮೀಕಿ ಮಹಾಕವಿಯು ಇಡೀ ಜಗತ್ತಿಗೆ ಸ್ವಾತಂತ್ರ‍್ಯ, ಸಮಾನತೆ ಹಾಗೂ ಸೋದರತೆಯ ಸಂದೇಶ ನೀಡಿದ್ದಾರೆ. ವಾಲ್ಮೀಕಿ ತತ್ವಜ್ಞಾನಿಯಾಗಿ, ಮಾನವೀಯ ಮೌಲ್ಯಗಳ ಹರಿಕಾರನಾಗಿ ಕಾಣುತ್ತಾರೆ. ಇವರ ಜೀವನವೇ ಪ್ರಗತಿಯ ಹಾದಿಯಲ್ಲಿ ಹಾಗೂ ಅರಿವಿನ ಮಾರ್ಗದಲ್ಲಿ ಸಾಗಿದೆ’. ಪ್ರತಿ ವರ್ಷದಂತೆ ಈ ವರ್ಷವೂ ಸಹ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಾಯಮ್ಮ, ಮುಖಂಡರಾದ ಹೊನ್ನೂರಪ್ಪ, ಯಂಕೋಬಣ್ಣ, ನಾಗಪ್ಪ, ಗಾದಿಲಿಂಗಪ್ಪ, ತಿಪ್ಪಯ್ಯ, ದುರುಗಯ್ಯ, ವಿರುಪಣ್ಣ, ಮುದಿಯಪ್ಪ, ದೊಡ್ಡನಾಯಕ, ಹೇಮಯ್ಯ, ವಡ್ಡಿನ ಪಕ್ಕೀರಪ್ಪ, ದೇವರಮನೆ ಕರಿಯಪ್ಪ, ಕಮಲಪುರ ಹೊನ್ನೂರಪ್ಪ, ತಿಮ್ಮಲಾಪುರ ಶಿವಣ್ಣ, ಮರಿಯಪ್ಪ, ಕೆಂಪು ವೆಂಕೋಬ, ನೆಲ್ಲುಡಿ ಬಸಪ್ಪ ಸೇರಿದಂತೆ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















