ಅ. 12 ರಂದು ಬೆಂಗಳೂರಿನಲ್ಲಿ ಡಿ ಕೆ ಶಿವಕುಮಾರ್ ಹಾಗೂ ವಿನಯ ಗುರೂಜಿ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ.
ಶಿವಮೊಗ್ಗ, ತೀರ್ಥಹಳ್ಳಿ: ಬೆಂಗಳೂರಿನ ಮಲೆನಾಡು ಹಿತರಕ್ಷಣಾ ಸಮಿತಿ ಪ್ರತಿ ವರ್ಷದಂತೆ ಕೊಡುವ ಮಲೆನಾಡು ರತ್ನ ಪ್ರಶಸ್ತಿಗೆ ತೀರ್ಥಹಳ್ಳಿಯ ಸಹಕಾರಿ ರತ್ನ, ಪ್ರಶಸ್ತಿ ಪುರಸ್ಕೃತರು ಹಾಗೂ ತೀರ್ಥಹಳ್ಳಿಯ ಪ್ರತಿಷ್ಠೆತಾ ಸಂಸ್ಥೆಯಾದ ಸಹ್ಯಾದ್ರಿಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ರಾಜ್ಯ ಭೂ ಬ್ಯಾಂಕ್ ನಿರ್ದೇಶಕರು, ತೀರ್ಥಹಳ್ಳಿ ಭೂ ಬ್ಯಾಂಕ್ ಅಧ್ಯಕ್ಷರು ಅದಾ ಬಸವಾನಿ ವಿಜಯದೇವ್ ಆಯ್ಕೆಗೊಂಡಿದರು, ಅಕ್ಟೊಬರ್ 12ರಂದು ಬೆಂಗಳೂರಿನ ರಾಜಾಜಿನಗರದ ಡಾ. ರಾಜಕುಮಾರ್ ಸಭಾಂಗಣದಲ್ಲಿ ಸಂಜೆ 4ಗಂಟೆಗೆ ಜರುಗಿದ ಮಲೆನಾಡು ಹಿತರಕ್ಷಣ ಸಮಿತಿಯ 8ನೇ ವರ್ಷದ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಸವಾನಿ ವಿಜಯದೇವ ರವರು ಈ ಸಮಾರಂಭ ನೋಡಿ ತುಂಬಾ ಖುಷಿ ಆಗುತಿದೆ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಿಂದ ತುಂಬಾ ಜನ ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಿದೀರಿ ಹಾಗೆ ಎತ್ತರಕ್ಕೆ ಬೆಳದಿದ್ದೀರಿ, ಹಾಗೆ ನೀವುಗಳು ತಮ್ಮ ಊರು, ತಂದೆ ತಾಯಿ ಹಾಗೂ ನಿಮ್ಮ ತೋಟ ಗದ್ದೆಗಳನ್ನು ಮರೆಯಬೇಡಿ ಎಂದು ಹೇಳಿದರು. ಡಿ ಕೆ ಶಿವಕುಮಾರ್, ವಿನಯ ಗುರೂಜಿ ಹಾಗೂ ಶೃಂಗೇರಿ ಶಾಸಕ ರಾಜೇಗೌಡರು ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದರು.
ವರದಿ : ಪ್ರಸಾದ್ ಹೆಚ್ ಬಿ ತೀರ್ಥಹಳ್ಳಿ.



















