ಅತ್ಯಂತ ದುರ್ದೈವದ ಸಂಗತಿಯನ್ನು ಹೇಳುತ್ತಿದ್ದೇನೆ ಮೇಲ್ವಿಚಾರಕರೇ…

ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಭಾಗ್ಯವಂತಿ ಅವರ ಆತ್ಮಹತ್ಯೆ ಖಂಡಿಸಿ ಕಲಬುರಗಿ ಸೇಡಂ ರಾಜ್ಯ ಹೆದ್ದಾರಿ ಬಂದ್ ಮಾಡಿ ಮೇಲ್ವಿಚಾರಕರ ಸಂಘದ ವತಿಯಿಂದ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ರಸ್ತೆ ತಡೆ ಚಳುವಳಿ ಮಾಡಲಾಯಿತು.
ನಮ್ಮ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮ ಪಂಚಾಯತ್ ಅರಿವು ಕೇಂದ್ರದ ಮೇಲ್ವಿಚಾರಕಿ ಶ್ರೀಮತಿ ಭಾಗ್ಯವಂತಿ ಎಂಬುವರು ಇದೀಗ ಗ್ರಾಮ ಪಂಚಾಯತ್ ಪಿಡಿಓ ನೀಡಿದ ಕಿರುಕುಳದಿಂದ ಅರಿವು ಕೇಂದ್ರದಲ್ಲೇ ನೇಣಿಗೆ ಶರಣಾಗಿದ್ದು ಅತ್ಯಂತ ದುರ್ದೈವ ಸಂಗತಿಯಾಗಿದೆ…
ಕಳೆದ ಕೆಲವು ತಿಂಗಳುಗಳಿಂದ ಮೇಲ್ವಿಚಾರಕಿಗೆ ವೇತನ ನೀಡದೆ ಸತಾಯಿಸುತ್ತಿದ್ದು, ಇಂದು ವೇತನ ಕೇಳಲಿಕ್ಕೆ ಹೋದರೆ ನಾನು ಕೊಡೋದಿಲ್ಲ ಏನು ಮಾಡಿಕೊಳ್ಳುತ್ತಿಯ್ಯಾ ಮಾಡಿಕೊ ಎಂದು ಹೇಳಿದ್ದಕ್ಕೆ ಮನನೊಂದು ಅರಿವು ಕೇಂದ್ರದಲ್ಲಿಯೇ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ…
ಆದ್ದರಿಂದ ಎಲ್ಲಾ ಜಿಲ್ಲೆಯ ಮೇಲ್ವಿಚಾರಕರು ನಾಳೆಯ ದಿನ ನಿಮ್ಮ ಜಿಲ್ಲೆಯ ಜಿಲ್ಲಾ ಪಂಚಾಯತ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಬೇಕಾಗಿ ತಮ್ಮಲ್ಲಿ ಬೇಡಿಕೊಳ್ಳುತ್ತೇನೆ…
- ನೊಂದ ಅರಿವು ಕೇಂದ್ರದ ಮೇಲ್ವಿಚಾರಕ



















