ಕಲಬುರಗಿ/ ಚಿಂಚೋಳಿ : ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಮೀತಿಮಿರಿದ್ರು, ಸಾರ್ವಜನಿಕರು ರಸ್ತೆಯ ಮೇಲೆ ಸಂಕಷ್ಟ ಎದುರಿಸುವಂತಾಗಿದ್ದು, ಕೂಡಲೇ ಬೀದಿ ನಾಯಿಗಳನ್ನು ಸ್ಥಳಾಂತರಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷಕುಮಾರ್ ರಾಠೋಡ್ ಅವರಿಗೆ ಮನವಿ ಸಲ್ಲಿಸಿದರು.
ಸುಲೇಪೇಟ ಗ್ರಾಮದ ಪ್ರತಿಯೊಂದು ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಮೀತಿಮಿರಿದ್ದು, ಮಕ್ಕಳಿಗೆ, ವಯೋ ವೃದ್ಧರಿಗೆ, ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿವೆ. ಇದರಿಂದ ಬೀದಿಯಲ್ಲಿ ಓಡಾಡಲು ಭಯಭೀತಿ ಎದುರಾಗಿದ್ದು, ನಿತ್ಯವು
ಬೀದಿ ಶಾಲಾಮಕ್ಕಳು ಶಾಲೆಗೆ ತೆರಳಲು ಭಯಭೀತಿ ಎದುರಾಗಿದ್ದು, ತಕ್ಷಣವೇ ನಾಯಿಗಳನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ರಾಠೋಡ, ಮಿರಿಯಾಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಮಲ್ಲಿಕಾರ್ಜುನ ಗಿರಿ.ವೀರೇಶ್ ಆಣದೂರ್, ಅಂಬರೀಷ ಗಣಾಪೂರ್, ಹಣಮಂತರಾವ್ ಪಾಟೀಲ್, ಮಹೇಶ್ ಆಣಕಲ್, ನವೀನ್ ಸಜ್ಜನ್, ಹಣಮಂತರೆಡ್ಡಿ, ಸಿದ್ದು ಹೊಸಳ್ಳಿ, ಎಲ್ಲಪ್ಪ ಚಿಂತಲ್, ಅಭಿಷೇಕ ಪಾಟೀಲ್, ಸಂತೋಷ విలి ಮುಂತಾದವರು ಉಪಸ್ಥಿತರಿದ್ದರು.
ಕಳೆದ 18 ದಿನಗಳ ಹಿಂದೆ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಯುವ ಮುಖಂಡರಾದ ಚೇತನ್ ಅಣ್ವಾರ್ ಅವರು ದೂರಿದ್ದಾರೆ ಇದಕ್ಕೆ ತಾಲೂಕ ಆಡಳಿತವೇ ನೇರ ಕಾರಣ ಎಂದು ಆರೋಪಿಸಿದ್ದಾರೆ.
ವರದಿ ಎಸ್. ವಿ. ಗಂಗಾಣಿ



















