
ನಿಮ್ಮ ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದಿರಲಿ | ಅನುದಾನ ಬಳಕೆಗೆ ಎಪಿಡಿಯ ಸಲಹೆ ಪಡೆವೆ
ಗುರುಮಠಕಲ್ : ಅ. 15 ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯಾದಗಿರಿ, ತಾಲೂಕ ಆಡಳಿತ ಗುರುಮಠಕಲ್ ಹಾಗೂ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (APD)ಸಂಸ್ಥೆ ಇವರುಗಳ ಸಂಯುಕ್ತಾಶ್ರದಲ್ಲಿ 88 ಜನ ವಿಕಲಚೇತನರಿಗೆ ಅವಶ್ಯ ಸಲಕರಣೆಗಳನ್ನು ಶಾಸಕ ಶರಣಗೌಡ ಕಂದಕೂರು ವಿತರಿಸಿ ನಿಮ್ಮ ಸಾಧನೆಗೆ ಅಂಗ ವೈಕಲ್ಯ ಅಡ್ಡಿಯಾಗದಿರಲಿ ಎಂದು ಹೇಳಿದರು.
ಎಪಿಡಿ ಸಂಸ್ಥೆ ಹಮ್ಮಿಕೊಂಡಿದ್ದ ಸಲಕರಣೆ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಪಿಡಿ ಸಂಸ್ಥೆ ವಿಕಲಚೇತನರ ಪರ ವಿಶೇಷ ಕಾಳಜಿ ವಹಿಸಿ ಅವರಿಗೆ ಅವಶ್ಯಕ ಸಾಧನ ಸಲಕರಣೆ ನೀಡಿ ಅವರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ, ಕಳೆದ ತಿಂಗಳು ನೂರಕ್ಕೂ ಅಧಿಕ ಜನರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ನೀಡಿರುತ್ತಾರೆ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಎಪಿಡಿ ಸಂಸ್ಥೆಯವರು ಅನೇಕ ಸೌಲಭ್ಯ ಮತ್ತು ಸವಲತ್ತುಗಳನ್ನು ನೀಡುವ ಮೂಲಕ ಗುರುಮಠಕಲ್ ತಾಲೂಕ ವ್ಯಾಪ್ತಿಯ ಅನೇಕ ಕಡೆ ವಿಕಲಚೇತನರಿಗೆ ಅನುಕೂಲ ಮಾಡಿಕೊಟ್ಟಿದೆ, ಸರ್ಕಾರದ ಸೌಲಭ್ಯಗಳನ್ನು ಸಕಾಲಕ್ಕೆ ವಿಕಲಚೇತನರಿಗೆ ಮುಟ್ಟಿಸುವ ನಿಮ್ಮ ಕೆಲಸ ಪುಣ್ಯದ ಕಾರ್ಯವಾಗಿದೆ. ಮುಂಬರುವ ಅನುದಾನದಲ್ಲಿ ಎಪಿಡಿ ಸಲಹೆ ಪಡೆಯುವೆ ಎಂದು ಭರವಸೆ ನೀಡಿದರು.
ಪುಟಪಾಕ ಪಂಚಾಯತಿ ದಂತಪುರ ಗ್ರಾಮದ ಬಸವೇಶ್ವರ ವಿಕಲಚೇತನ ಸ್ವ ಸಹಾಯ ಸಂಘಕ್ಕೆ 1.5 ಲಕ್ಷ ಸಾಲ ಸೌಲಭ್ಯದ ಚೆಕ್ ಸೇರಿದಂತೆ 88 ವಿಕಲಚೇತನರಿಗೆ ವಾಕರ್, ಸ್ಟಿಕ್, ಸಿಪಿ ಚೇರ್, ಬೈಂಡ್ ಸ್ಟೀಕ್ ಸೇರಿದಂತೆಯೇ ವಿವಿಧ ಸಕಲರಣೆಗಳನ್ನು ವಿತರಿಸಲಾಯಿತು. ಸಂಸ್ಥೆಯ ಸಂಯೋಜಕ ವಿರೂಪಾಕ್ಷ ಪಾಟೀಲ ಸ್ವಾಗತಿಸಿದರು. ವೈದ್ಯಾಧಿಕಾರಿ ಮಹೇಶ್ ಸಜ್ಜನ, ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ.ದಂಡೊತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಬಸಪ್ಪ, ಎಪಿಡಿ ಸಂಸ್ಥೆಯ ನಿರ್ದೇಶಕ ರಮೇಶ ಗೊಂಗಡಿ, ಸಂಸ್ಥೆಯ ಜಿಲ್ಲಾ ಸಂಯೋಜಕರಾದ ನಾಗಪ್ಪ.ಜಿ. ಅವಟಿ ಸಿಬ್ಬಂದಿ ಶ್ರೀ ಕುಮಾರ, ಅಂಬಿಕ, ಶಿಲ್ಪಾ ಎಂ, ಶಿಲ್ಪಾ ಎಸ್, ರೇಷ್ಮಾ, ನಾಗಮಣಿ, ಸುರೇಶ, ಗಂಗಪ್ಪ, ಲಕ್ಮಿ, ಯಲ್ಲಪ್ಪ, ಸವಿತಾ, ಪಾರ್ವತಿ, ಸುಮಿತ್ರ ಶಿಲ್ಪಾ, ಗಂಗಪ್ಪ, ಲಕ್ಷ್ಮೀ, ಅರ್.ಪಿ.ಡಿ ಟಾಸ್ಕ ಫೋರ್ಸ್ ಸಿದ್ದನಗೌಡ, ಹಣಮಂತ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















