ಬಾಗಲಕೋಟೆ/ಇಳಕಲ್ : ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ ಹಾಗೂ ವೃತ್ತಿ ರಂಗಭೂಮಿ ಕಲಾವಿದರ ಸಂಘ, ಇಳಕಲ್
ಇವರ ಸಹಯೋಗದಲ್ಲಿ ಇತ್ತೀಚಿಗೆ ನಮ್ಮನ್ನಗಲಿದ ನಾಲ್ಕು ಜನ ರಂಗ ದಿಗ್ಗಜರಿಗೆ ನುಡಿ ನಮನ ಸಲ್ಲಿಸಲಾಯಿತು.
- ರಂಗಭೂಮಿ ಮತ್ತು ಚಲನಚಿತ್ರ ನಟ ಶ್ರೀ ಯಶವಂತ ಸರದೇಶಪಾಂಡೆ
- ಹಿರಿಯ ರಂಗಭೂಮಿ ಕಲಾವಿದೆ ಹನುಮಕ್ಕ, ಮರಿಯಮ್ಮನಹಳ್ಳಿ
- ವಿಜಯಪುರದ ದೀಪದರ್ಶಿನಿಯ ಮಾಲೀಕರು, ಲೈಟ್ ಸಿಂಗ್ ಎಂದೇ ಖ್ಯಾತರಾದ ಶ್ರೀ ಯೋಗೇಂದ್ರ ಸಿಂಗ್
- ಧಾರವಾಡ ರಂಗಾಯಣದ ನಿರ್ದೇಶಕ, ಜನಪ್ರಿಯ ಹಾಸ್ಯ ನಟ, ರಂಗಕರ್ಮಿ ಶ್ರೀ ರಾಜು ತಾಳಿಕೋಟಿ
ಈ ನಾಲ್ಕೂ ಜನರ ಕಲಾ ಸೇವೆ, ಸಾಧನೆ ಮತ್ತು ಜೀವನ ಪಯಣವನ್ನು ಶ್ರದ್ಧೆ ಭಕ್ತಿಯಿಂದ ಸ್ಮರಿಸಲಾಯಿತು. ಅವರ ಚೇತನಾತ್ಮಗಳಿಗೆ ಚಿರಶಾಂತಿ ಕೋರಲಾಯಿತು.
ಶ್ರೀಯುತ ಪ್ರೊ. ಕೆ. ಎ. ಬನ್ನಟ್ಟಿ, ಶ್ರೀ ಮಹಾದೇವ ಕಂಬಾಗಿ, ಶ್ರೀ ಬಸವರಾಜ ಮಠದ, ಶ್ರೀ ಮಹಾಂತೇಶ ಗಜೇಂದ್ರಗಡ, ಶ್ರೀ ಹನುಮಾನದಾಸ ಪವಾರ (ಢಗಳಚಂದ್), ಶ್ರೀ ಚಂದ್ರಶೇಖರ ವಂದಕುದ್ರಿ, ಶ್ರೀ ಬಸವರಾಜ ನಾಡಗೌಡ, ಶ್ರೀ ಸಂಗಮೇಶ ಬಂಡರಗಲ್ಲ, ಶ್ರೀ ಪ್ರಭಯ್ಯ ಲೂತಿಮಠ, ಶ್ರೀ ಖಾಜೇಸಾಬ್ ಸೋಲಾಪೂರ, ಶ್ರೀಮತಿ ರೇಶ್ಮಾ ಅಳವಂಡಿ, ಶ್ರೀ ಶೇಖರಪ್ಪ ಜಾಲಿಹಾಳ, ಶ್ರೀ ಕಾರ್ತಿಕ್ ಕೊಪ್ಟರದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















