ಜೀವಸಂಕುಲದ ಉಸಿರು
ಪಾವಿತ್ರ್ಯತೆಗೆ ನಿನ್ನ ಹೆಸರು
ನೀನಿದ್ದಲ್ಲೆಲ್ಲಾ ಹಸಿರೇ ಹಸಿರು
ಹಸುವಿದ್ದ ಮನೆ ಸಂಪದ್ಭರಿತ
ಆಕಳು ಕರುಗಳು ಗೌರವಾನ್ವಿತ
ಗೋಮಾತೆ ನಿವಾಸ ಸಮೃದ್ಧಿ ಭರಿತ
ಪಂಚಗವ್ಯ ಪಂಚಾಮೃತ ಶ್ರೇಷ್ಟ
ಹಾಲಿನ ಅಭಿಷೇಕ ದೇವಗಿಷ್ಟ
ಹಾಲು ಮೊಸರು ತುಪ್ಪ ಶಕ್ತಿದಾಯಕ
ಕಾಮನೆಗಳೀಡೇರಿಸುವ ಧೇನು
ಬೆನ್ನಮೇಲೆ ಸೂರ್ಯ ಕೇತುವಿನ
ರವಿಕಿರಣ ಸ್ಪರ್ಷದಿ ಚಿನ್ನಕಣ ನಿನ್ನಲ್ಲಿ
ಪೂಜ್ಯನೀಯ ಕಾಮಧೇನು
ಇಂದು ವಸುಬಾರಸ ದಿನವು
ನಿನಗೆ ಬಾಗಿ ನಮ್ಮೆಲ್ಲರ ವಂದನೆಗಳು
- ಅನ್ನಪೂರ್ಣ ಸು ಸಕ್ರೋಜಿ, ಪುಣೆ




















