ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜೀವ ವಿಮೆ ಜೀವನಕ್ಕೆ ಅತಿ ಅವಶ್ಯ : ಶೀಗಿಹಳ್ಳಿ

ಬಾಗಲಕೋಟೆ: ಜೀವನ ನಿಂತ ನೀರಲ್ಲ ಸದಾ ಹರಿಯುತ್ತಿರುತ್ತದೆ ನಮ್ಮ ದುಡಿಮೆ ಜೊತೆಗೆ ಉಳಿತಾಯವೂ ಬಹಳ ಅವಶ್ಯವಾಗಿದೆ ಎಂದು ಬೆಳಗಾವಿ ಲಿಯಾಪಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಶೀಗಿಹಳ್ಳಿ ಹೇಳಿದರು.


ಅವರು ಕಳೆದ ರವಿವಾರ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘ ಬಾಗಲಕೋಟೆ ಹಾಗೂ ಬೀಳಗಿ ಸಂಪರ್ಕ ಶಾಖೆಯ ಸಂಘದ ಸವನ ಸದಸ್ಯರ ಸಾಮಾನ್ಯ ಸಭೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಆಪತ್ಕಾಲದಲ್ಲಿ ಉಳಿತಾಯ ನಮ್ಮನ್ನು ಸುರಕ್ಷಿಸುತ್ತದೆ, ಜೀವವಿಮೆ ನಮ್ಮ ಕುಟುಂಬವನ್ನು ರಕ್ಷಿಸುವ ಕೆಲಸವನ್ನು ನಿರಂತರ ಮಾಡುತ್ತಾ ಬಂದಿದೆ ಆದ್ದರಿಂದ ಎಲ್ಲರೂ ಜೀವವಿಮೆ ಮಾಡಿಸಿ ತಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿ ಲಿಯಾಪಿ ಸಂಘಟನೆಯ ವಿಭಾಗ ಮಟ್ಟದಲ್ಲಿ ಸಂಘಟಿತ ಹೋರಾಟಗಳ ಮೂಲಕ ಜಿ ಎಸ್ ಟಿ ಗ್ರೂಪ್ , ಇನ್ಸೂರೆನ್ಸ್ ಮೆಡಿಕ್ಲೇಮ ಸೇರಿದಂತೆ ಪ್ರಮುಖ ಬೇಡಿಕೆಗಳು ಕಾಲಕಾಲಕ್ಕೆ ಹೋರಾಟದ ಫಲವಾಗಿ ಪ್ರತಿನಿಧಿಗಳಿಗೆ ಹೆಚ್ಚಿನ ಸವಲತ್ತುಗಳನ್ನು ಕೊಡುತ್ತಿದೆ ನಮ್ಮೆಲ್ಲರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಲಿಯಾಪಿ ರಾಷ್ಟ್ರ ಮಟ್ಟದ ಹಾಗೂ ರಾಜ್ಯಮಟ್ಟದ ಸಂಘಟನೆಗಳು ಕರೆ ನೀಡಿದಾಗ ಎಲ್ಲರೂ ತಮ್ಮ ತಮ್ಮ ಶಾಖೆಯಲ್ಲಿ ಪ್ರತಿಭಟಿಸಿ ರಾಷ್ಟ್ರ ಮಟ್ಟದ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೇಳಿದಾಗ ಸಂಘಟನೆಯಿ೦ದ ಬೇಡಿಕೆಗಳು ಈಡೇರುತ್ತವೆ ಎಂದರು.
ಬಾಗಲಕೋಟೆ ಶಾಖಾಧಿಕಾರಿ ಎಮ್ ಡಿ ರಕ್ಷಿತ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಎಲ್ಐಸಿ ದೇಶದ ಅಭಿವೃದ್ದಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದು ಭಾರತೀಯ ಜೀವವಿಮೆ ನಿಗಮ ಸಾಮಾಜಿಕ ವ್ಯವಸ್ಥೆಗೂ ಅವರ ಕೊಡುಗೆ ನೀಡುತ್ತಿರುವ ಮಹಾ ಸಂಸ್ಥೆಯಾಗಿದೆ, ಮನುಷ್ಯನಿಗೆ ಬದುಕಲು ಅನ್ನ ನೀರು ಎಷ್ಟು ಅವಶ್ಯವೋ ಬದುಕಲು ಆರ್ಥಿಕ ಭದ್ರತೆಗಾಗಿ ಆಪತ್ಕಾಲದಲ್ಲಿ ಜೀವವಿಮೆ ಬಹಳ ಅವಶ್ಯವಾಗಿದೆ
ವಿಮೆಯಿಂದ ಆರ್ಥಿಕ ಅಭದ್ರತೆಯಿಂದ ಪಾರಾಗಬಹುದು ಎಂದರು.
ಶಿರಸಿಯ ನಿವೃತ್ತ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ ಆಧುನಿಕ ಸಮಾಜದಲ್ಲಿ ಖರ್ಚು ವೆಚ್ಚಗಳು ಅತಿಯಾಗಿವೆ ಈ ದೇಶದಲ್ಲಿ ಉಳಿತಾಯ ಎನ್ನುವುದು ಬಹಳ ಕಡಿಮೆಯಾಗಿರುವುದು ಈ ಕಾಲಘಟ್ಟದ ದುರಂತವೆ ಸರಿ ಆದ್ದರಿಂದ ಖರ್ಚನ್ನು ಕಡಿಮೆ ಮಾಡಬೇಕಾದ ಅನಿವಾರ್ಯ ಇದೆ. ಜೀವವಿಮೆ ಪಾಲಿಸಿ ಆಪತ್ಕಾಲದಲ್ಲಿ ರಕ್ಷಿಸುತ್ತದೆ ಎಂಬುವುದನ್ನು ಸಮಾಜಕ್ಕೆ ತೋರಿಸಿ ಕೋಟ್ಟಿದೆ. ಆದ್ದರಿಂದ ಪಾಲಿಸಿ ಮಾಡಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಜೀವವಿಮೆ ಆಪತ್ಕಾಲದ ಬಂಧಿಸಿದ೦ತೆ ಎಂದರು.
ಮುಂದುವರೆದು ಪ್ರತಿನಿಧಿಗಳಿಗೆ ಸಂಸ್ಥೆಯಿ೦ದ ಸಿಗುವ ಸೌಲಭ್ಯಗಳು ಎಲ್ಲಾ ಪಾಲಿಸಿಗಳ ಬಗ್ಗೆ ಸವಿವರವಾಗಿ ಮಾರಾಟ ಮಾಡುವ ವಿಧಾನ ಸೇರಿದಂತೆ ಪ್ರತಿನಿಧಿಗಳಿಗೆ ಹಾಗೂ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಉಪಶಾಖಾಧಿಕಾರಿ ಪಿ. ಆರ್. ಸಿದ್ದೇಶ್ವರ ಮಾತನಾಡಿ ೬೮ ವರ್ಷಗಳ ಹಿಂದೆ ಸ್ಥಾಪನೆಗೊಂಡ ಎಲ್, ಐ.ಸಿ. ತನ್ನ ಪ್ರಗತಿಯಲ್ಲಿ ಹಿನ್ನಡೆ ಸಾಧಿಸಿಲ್ಲ ವರ್ಷ ವರ್ಷಕ್ಕೆ ಹೆಚ್ಚು ಪ್ರಗತಿಯ ಮನ್ನೋಟ ನೀಡುತ್ತವೆ ಹೀಗಾಗಿ ಕೆಲವೆ ದಿನಗಳಲ್ಲಿ ಎಲ್ ಐ ಸಿ ಜಗತ್ತನಲ್ಲಿಯೇ ಒಂದನೇ ಸ್ಥಾನಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಅಭಿವೃದ್ಧಿ ಅಧಿಕಾರಿ ಎ. ಆರ್. ಜಂಬಗಿ ಮಾತನಾಡಿ ನಾವು ಮಾಡುವ ಕೆಲಸದಲ್ಲಿ ಶ್ರದ್ದೆ ನಿಷ್ಠೆಯಿಂದ ಸಂಸ್ಥೆ ಕೆಲಸ ಮಾಡಿದರೆ ಸಂಸ್ಥೆಯು ಬೆಳೆಯುತ್ತದೆ ಜೊತೆಗೆ ಸಂಘಟನೆಯಿ೦ದ ನಮ್ಮ ಜೀವನದ ಬದಲಾವಣೆ ಹೊಂದುತ್ತದೆ. ತರಬೇತಿಗಳು ಜಾತ್ರೆ ಉತ್ಸವಗಳಾಗಬಾರದು ಎಂದ ಅವರು ಅನಂತ ಪದ್ಮನಾಭನವರ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದ ದಿಕ್ಸೂಚಿಯೆ ಬದಲಾಗುವುದು ಎಂದರು.
ಬೆಳಗಾವ ಲಿಯಾಪಿ ಮಾಜಿ ಸದಸ್ಯರು ಹಾಗೂ ಜೆ ಸಿ ಸಿ ಸದಸ್ಯ ಜಿ.ಆಯ್ ಸತರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಂಘಟನೆ ಪ್ರತಿನಿಧಿಗಳಿಗೆ ಹಾಗೂ ಪಾಲಿಸಿದಾರರಿರಗೆ, ಸಿಗುವ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ನಮ್ಮ ಸಂಘಟನೆಯಿಂದ ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು ಲಿಯಾಪಿ, ಸಂಘಟನೆಯ ವಿಭಾಗದ ಖಜಾಂಚಿ ಪಿ. ಆರ್. ದೇಶಪಾಂಡೆ ಮಾತನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಎಸ್ ಎಮ್ ಮದರಖಂಡಿ ಬೀಳಗಿ ಶಾಖಾಧಿಕಾರಿ ಬಲರಾಮ ಪಾಡಿ.
ಪ್ರಧಾನ ಕಾರ್ಯದರ್ಶಿ ಬಸವರಾಜ ಎಸ್. ಹೋಟ ವರದಿ ವಾಚನ ಮಾಡಿದರು. ಎಚ್ ವಾಯ್ ಮೂಕಾಶಿ ಸಂಘದ ಲೆಕ್ಕಪತ್ರ ಮಂಡನೆ ಮಾಡಿದರು. ಅತಿಥಿಗಳ ಪರಿಚಯವನ್ನು ರಾಜೇಶ್ ರಾಯಬಾಗಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷೆ ಎಂ. ಆಯ್. ಹುಲ್ಲಿಕೇರಿ ವಹಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಅಧ್ಯಕ್ಷರು ಅತಿಥಿಗಳು ಮತ್ತು ಉಪನ್ಯಾಸಕರಾದ ಶಿರಸಿಯ ಆನಂತ ಪದ್ಮನಾಭರವರನ್ನು ಸೇರಿದಂತೆ ೨೦೨೪-೨೦೨೫ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ.ಯು.ಸಿ.ಯಲ್ಲಿ ಹೆಚ್ಚಿನ ಅಂಕ ಗಳಿಸಿದ ಪ್ರತಿನಿಧಿ ಮಕ್ಕಳಿಗೆ ಹಾಗೂ ೨೦೨೪-೨೦೨೫ ನೇಸಾಲಿನ ಹೆಚ್ಚಿನ ವಿಮಾ ವ್ಯವಹಾರ ಮಾಡಿದ ಮತ್ತು ೨೦೨೪ ಎಮ್ ಆರ್ ಟಿ ಹಾಗೂ ಗ್ಯಾಲಾಕ್ಸಿ ಕ್ಲಬ್ ಪ್ರತಿನಿಧಿಗಳಿಗೆ ಮತ್ತು ೨೫ ವರ್ಷ ಪ್ರತಿನಿಧಿತ್ವ ಪೂರೈಸಿದ ಪ್ರತಿನಿದಿಗಳಿಗೆ ಹಾಗೂ ಪತ್ರಿನಿಧಿಗಳಾಗಿ ಸೇವೆ ಸಲ್ಲಿಸಿ ಅಭಿವೃದ್ದಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು, ಪತ್ರಕರ್ತ ಜಗದೀಶ ಹದ್ಲಿ ಇವರನ್ನು ಇದೇ ಸಂದರ್ಭದಲ್ಲಿ ವೇದಿಕೆ ಮೇಲಿನ ಗಣ್ಯರು ಸನ್ಮಾನಿಸಿದರು.
ಶ್ರೀಮತಿ ಎನ್ ಎಸ್ ಬಟ್ ಹಾಗೂ ಸಂಗಡಿಗರು ನಿಗಮಗೀತೆ ಹಾಗೂ ಲಿಯಾಪಿ ಗೀತೆಯನ್ನು ಹಾಡಿದರು
ಎಂ ವೈ ಹುಲಿಕೇರಿ ಸ್ವಾಗತಿಸಿದರು ಪ್ರತಿನಿಧಿ ಎಸ್ ಬಿ ಹಂಚಿನಾಳ ನಿರೂಪಿಸಿದರು, ಪಿ ಆರ್ ದೇಶಪಾಂಡೆ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!