ಕಲಬುರಗಿ: ದೇಶದ, ಜನತೆ ಹಾಗೂ ಸಂವಿಧಾನವನ್ನು, ದೇಶವಾಸಿಗಳಾದ ಹಿಂದೂ, ಮುಸ್ಲಿ, ಬೌದ್ಧ, ಕ್ರಿಷಿಯನ್, ಸಿಕ್ ಮತಿತರರು ಸೌಹಾರ್ದತಾ ಜೀವನವನ್ನು ದ್ವೇಷಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸಾರ್ವಜನಿಕ ಸ್ಥಳದಲ್ಲಿ ತನ್ನ ಕಾರ್ಯ ಚಟುವಟಿಕೆ ನಡೆಸಿದಂತೆ ನಿರ್ಬಂಧಿಸಬೇಕೆಂದು ಸಚಿವರಾದ ಪ್ರಿಯಾಂಕ ಖರ್ಗೆ ಅವರ ಹೇಳಿಕೆಯನ್ನು ಗುಂಡಗುರ್ತಿ ಕಾಂಗ್ರೆಸ್ ಮುಖಂಡ ಶ್ರೀನಿವಾಸ ಬಣ್ಣಕ್ಕಿ ಅವರು ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಸಮಾನತೆ, ಸಹೋದರತೆ ಹಾಗೂ ಮಾನವತೆಯ ಬಹು ದೊಡ್ಡ ಶತ್ರುವಾದ ಆರ್ ಎಸ್ ಎಸ್ ಹಿಂಸಾಚಾರ, ಕ್ರೌರ್ಯ, ಭಯೋತ್ಪಾದನೆ ಹಾಗೂ ಹಿಂಸಾತ್ಮಕ ಕೃತ್ಯಗಳ ಮೂಲಕ ಭಾರತದ ಸಮಸ್ತ ಹಿಂದೂಗಳನ್ನು ವಿಶೇಷವಾಗಿ ದಲಿತರನ್ನು ಈ ಕೃತ್ಯಗಳಿಗೆ ಬಳಸಿಕೊಂಡು ಮೋಸಗೊಳಿಸುತ್ತಿದೆ. ರಾಷ್ಟ್ರ ಹಾಗೂ ಸಂಸ್ಕೃತಿ ಹೆಸರಲ್ಲಿ ಶಾಲೆ, ಕಾಲೇಜು ಕಚೇರಿ, ಮಠ, ಆಟದ ಮೈದಾನ ಮತ್ತು ಮಂದಿರಗಳಲ್ಲಿ ಎಲ್ಲಾ ಕಡೆಗಳಲ್ಲಿ ಬೆತ್ತದ ಕೋಲುಗಳನ್ನು ಹಿಡಿದು ತಿರುಗಾಡಲು ಆರ್.ಎಸ್.ಎಸ್. ಗೆ ಕಾನೂನು ಪ್ರಾಧಿಕಾರದ ಪರವಾನಿಗೆ ಇದೆಯಾ ಈ ಸಂಘವು ಭಾರತ ದೇಶಕ್ಕೆ ಒಳಿತು ಮಾಡಿದ ಇತಿಹಾಸವೇ ಇಲ್ಲ. ಆದರೆ ದ್ರೋಹ ಮಾಡಿದ ಇತಿಹಾಸ ತುಂಬಾ ಇದೆ. ಭಾರತ ಸ್ವಾತಂತ್ರ್ಯ ಚಳುವಳಿಯ ಕಡು ವೈರಿಯಾಗಿದ್ದ ಈ ಸಂಘವು ಬ್ರಿಟಿಷರ ಪರವಾಗಿ ನಿಂತದ್ದಕ್ಕೆ ಸಾಕಷ್ಟು ಸಾಕ್ಷಿ ಇದ್ದರು ಸಹ ಇದಕ್ಕೆ ಏಕೆ ಎಲ್ಲಿಲ್ಲದ ಸ್ಥಾನಮಾನ. ಮಹಾತ್ಮ ಗಾಂಧಿಯನ್ನು ಕೊಂದು ಕೇಕೆ ಹಾಕಿದ ನಾತೂರಾಮ್ ಗೂಡ್ಸೆಯನ್ನು ಕೊಂಡಾಡುವ ಈ ಸಂಘಟನೆಯ ನೆರಳು ನಮ್ಮ ಮಕ್ಕಳಿಗೆ ಬಿದ್ದರೆ ಆ ಮಕ್ಕಳ ಮುಂದಿನ ಭವಿಷ್ಯವೇನು. ನಾಡಿನ ಜನ ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಈ ಭಯೋತ್ಪಾದಕ ಸಂಸ್ಥೆಯನ್ನು ನಿಗ್ರಹಿಸುವ ಸಚಿವರಾದ ಪ್ರಿಯಾಂಕ ಖರ್ಗೆ ಹಾಗೂ ಸಿದ್ದರಾಮಯ್ಯನವರ ಪರ ನಾಡಿನ ಪ್ರಜ್ಞಾವಂತ ಯುವ ಸಮುದಾಯ ಮತ್ತು ಅಹಿಂದ ವರ್ಗ ನಿಲ್ಲಬೇಕೆಂದು ಅವರು ಮನವಿ ಮಾಡಿಕೊಂಡರು.
- ಕರುನಾಡ ಕಂದ




















