ಬಾಗಲಕೋಟೆ: ಗದ್ದನಕೇರಿ ಕ್ರಾಸ್ ನಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಕಾರ್ಯಕ್ರಮ ಪ್ರಯುಕ್ತ ಗಣವೇಷದಾರಿಗಳ ಮೆರವಣಿಗೆ ಗದ್ದನಕೇರಿ ಗ್ರಾಮಕ್ಕೆ ಹೊರಟಿತು.
ತಮ್ಮ ಕೈಯಲ್ಲಿದ್ದ ದಂಡವನ್ನು ಬೀಸುತ್ತಾ ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ, ಪುಟ್ಟ ಮಕ್ಕಳು ಗಣವೇಷಧಾರಿ ಸಮವಸ್ತ್ರ ಧರಿಸಿದ್ದನ್ನು ನೋಡಿ ಸಾರ್ವಜನಿಕರು ಹಾಗೂ ಸಂಘದ ಕಾರ್ಯಕರ್ತರು ಹೂವಿನ ಮಳೆ ಸುರಿಸಿದರು, ಸ್ಥಳಕ್ಕೆ ಆಗಮಿಸಿದ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಹೂವಪ್ಪ ರಾಥೋಡ್, ಜಿಲ್ಲಾ ಪೊಲೀಸ್ ಕಮಿಷನರ್ ಸಿದ್ದಾರ್ಥ್ ಗೋಯಲ್, ಆರ್ ಎಸ್ ಎಸ್ ಪಥ ಸಂಚಲನ ಕಾರ್ಯಕ್ರಮ ಮುಗಿಯುವವರೆಗೂ ಸ್ಥಳದಲ್ಲಿ ಇದ್ದರು.
ವರದಿ ಶೇಖಪ್ಪ ಬಾಳಿಕಾಯಿ



















