
ಬೆಳಗಾವಿ : ಬೆಳಗಾವಿ ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
ಈ ಚುನಾವಣೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿ ಅವರು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಈ ಗೆಲುವಿನಿಂದ ಸಹಕಾರ ವಲಯದಲ್ಲಿ ಸವದಿ ಅವರ ಪ್ರಭಾವ ಮತ್ತಷ್ಟು ಬಲಪಟ್ಟಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ನಡೆದ ಈ ಚುನಾವಣೆಗೆ ಸಹಕಾರ ವಲಯದ ಜನರು ಹಾಗೂ ರಾಜಕೀಯ ನಾಯಕರಿಂದ ವಿಶೇಷ ಗಮನ ಸೆಳೆಯಲಾಗಿತ್ತು.
ಲಕ್ಷ್ಮಣ ಸವದಿ ಅವರ ಗೆಲುವಿಗೆ ಅಭಿಮಾನಿಗಳು ಮತ್ತು ಬೆಂಬಲಿಗರು ಸಂಭ್ರಮ ವ್ಯಕ್ತಪಡಿಸಿದ್ದಾರೆ.
ವರದಿ. ವಿಠ್ಠಲ ಖೋಕಾಟೆ, ಅಥಣಿ




















