ಯಾದಗಿರಿ/ಗುರುಮಠಕಲ್: ಪಟ್ಟಣದ ಶ್ರೀರಾಮ್ ಎಜ್ಯುಕೇಶನಲ್ ಡೆವೆಲಪ್ ಮೆಂಟ್ ಟ್ರಸ್ಟ್ (ರಿ.) , ಜ್ಞಾನವೃಕ್ಷ ನವೋದಯ ತರಬೇತಿ ಸಂಸ್ಥೆಯು ತರಬೇತಿ ಪಡೆಯುವ ವಿದ್ಯಾರ್ಥಿಗಳ ಪಾಲಕರ ಸಭೆ ಮತ್ತು ಸಂಸ್ಥೆಯಿಂದ ತರಬೇತಿ ಪಡೆದು ಸೈನಿಕ, ಮೊರಾರ್ಜಿ, ನವೋದಯ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಇದೇ ತಿಂಗಳ 26 ರವಿವಾರದಂದು ನಾರಾಯಣಪೇಟ ರಸ್ತೆಗೆ ಹೊಂದಿಕೊಂಡಿರುವ ನಳಂದ ಸ್ಟಡಿ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ ಎಂದು ರಮೇಶ್ ಅಲಸೂರ ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ನಿಶ್ಕಲ ಮಂಟಪದ ನಿಜಗುಣಾನಂದ ಸ್ವಾಮಿಗಳು ವಹಿಸಲಿದ್ದಾರೆ, ನೇತೃತ್ವವನ್ನು ಗುರುಮಠಕಲ್ ಖಾಸಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ವೈಜ್ಞಾನಿಕ ಸಂಶೋದನಾ ಪರಿಷತ್ತಿನ ಸಂಸ್ಥಾಪಕರು ಹುಲಿಕಲ್ ನಟರಾಜ, ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ ಐ ಹಣಮಂತು ಬಂಕಲಗಿ, ಜಗವಾಣಿ ಪತ್ರಕರ್ತರಾದ ವಾಸುದೇವ, ಶಿಕ್ಷಣ ಸಂಯೋಜಕರಾದ ರವೀಂದ್ರ ಚೌವ್ಹಾಣ್ ಭಾಗವಹಿಸಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ವೀರೇಶ ನರ‍್ವ, ಭೀಮು ಗಿರಿಗಿರಿ, ಗುಂಡೇಶ ಹಲಗಿ ಭಾಗಿಯಾಗಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















