ಬಾಗಲಕೋಟೆ/ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಿರಂತರ ನಡೆದುಕೊಂಡು ಬಂದಿರುವ ಮನೆಯಂಗಳದಲ್ಲಿ ಶರಣರ ಮನದ ಮಾತು, ತತ್ವದರ್ಶನ, 93 ನೇ ತಿಂಗಳ ಕಾಯ೯ಕ್ರಮವು ನಾಳೆ ದಿ.22 ಬುಧವಾರ ಮುಂಜಾನೆ ಸಮಯದಲ್ಲಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳ ಸಾನಿಧ್ಯದಲ್ಲಿ ನಡೆಯಲಿದೆ. ವಚನ ಚಿಂತನ, ಗುರುಭಜನೆ, ಓಂಕಾರ ನಾಮಸ್ಮರಣೆ, ಸಾಧಕರಿಗೆ ಸತ್ಕಾರ, ಮಂಗಲ, ಪ್ರಸಾದ ಜರುಗುವುದು.
ಸಭೆಯ ಸಮ್ಮುಖತ್ವವನ್ನು ಮುತ್ಯಾ ಮಹಾಳಿಂಗೇಶ್ವರ ದೇವರ ಪೂಜಾರಿಗಳಾದ ಗುರುಪ್ರಸಾದ್ ಸ್ವಾಮೀಜಿ ಅವರು ವಹಿಸುವರು ಎಂದು ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಯುವ ಮುಖಂಡ ಶ್ರೀ ನಿವಾಸ ಪ್ರಸಾದ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















