ಕಲಬುರಗಿ/ ಕಾಳಗಿ : ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಸುಕ್ಷೇತ್ರ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ರೇವಗ್ಗಿ – ರಟಕಲ್ ಗುಡ್ಡದಲ್ಲಿ ಗೋಪೂಜೆ ನೆರವೇರಿತು.
ಸರ್ಕಾರದ ನಿರ್ದೇಶನದಂತೆ ಶ್ರೀ ರಾಮಲಿಂಗಾ ರೆಡ್ಡಿ ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು, ಮಾನ್ಯ ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು, ಮತ್ತು ಮಾನ್ಯ ಪ್ರಭು ರೆಡ್ಡಿ ಸಹಾಯಕ ಆಯುಕ್ತರು ಸೇಡಂ ಹಾಗೂ ದೇವಸ್ಥಾನ ಆಡಳಿತ ಅಧಿಕಾರಿಗಳ ಆದೇಶದ ಮೇರೆಗೆ ದಿನಾಂಕ 22 /10/ 2025 ರ ಬುಧವಾರ ಸಂಜೆ 6:30 ಕ್ಕೆ ದೀಪಾವಳಿ ಬಲಿಪಾಡ್ಯಮಿ ದಿನದಂದು ಗೋಧೂಳಿ ಲಗ್ನದಲ್ಲಿ ಗೋಪೂಜೆ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಷ ಬ್ರ ಶ್ರೀ. ರೇವಣಸಿದ್ಧ ಶಿವಾಚಾರ್ಯರು ರೇವಣಸಿದ್ದೇಶ್ವರ ಹಿರೇಮಠ ರಠಕಲ್, ಪೂಜ್ಯಶ್ರೀ ನೀಲಕಂಠ ದೇವರು ದೊಡ್ಡಮಠ ರಟಕಲ್ ಭಾಗವಹಿಸಿದ್ದರು. ಗೋಪಾಲಕರು ಗೋವುಗಳಿಗೆ ವಿಶೇಷವಾಗಿ ಅಲಂಕಾರ ಮಾಡಿದರು, ಪೂಜ್ಯರು ಗೋವುಗಳಿಗೆ ಪೂಜೆ ಮಾಡಿ ಪ್ರಸಾದ ನೈವೇದ್ಯ ನೀಡಿದರು.
ಈ ಸಂದರ್ಭದಲ್ಲಿ ಪೂಜ್ಯರು ಮಾತನಾಡಿ ಎಲ್ಲಾ ಭಕ್ತಾದಿಗಳಿಗೆ ಆ ರೇವಣಸಿದ್ದೇಶ್ವರನ ಕೃಪೆ ಮತ್ತು ಆ ಗೋವುಗಳ ಆಶೀರ್ವಾದ ತಮ್ಮಮೇಲೆ ಇರಲಿ ಎಂದು ದೀಪಾವಳಿ ಹಬ್ಬದ ಶುಭಾಶಯಗಳನ್ನು ಹೇಳುತ್ತಾ ದೀಪದಂತೆ ತಮ್ಮ ಮನೆಯಲ್ಲಿ ಸುಖ ಶಾಂತಿ ನೆಲೆಸಲಿ ಸಂಸಾರದಲ್ಲಿ ಚೆನ್ನಾಗಿರಲಿ, ಆರೋಗ್ಯ ಭೋಗ ಭಾಗ್ಯ ಸಿರಿ ಸಂಪತ್ತು ಶಾಶ್ವತವಾಗಿ ಸದಾ ಕರುಣಿಸಲೆಂದು ಹೇಳಿದರು.
ಹಿಂದೂ ಧರ್ಮದಲ್ಲಿ ಗೋವಿನಲ್ಲಿ ಕೋಟ್ಯಾನು ಕೋಟಿ ದೇವತೆಗಳನ್ನು ಕಂಡಿದ್ದಾರೆ. ಅದಕ್ಕಾಗಿ ಗೋಮಾತೆಯನ್ನು ದೇವತೆ ಎಂದು ಕರೆಯುತ್ತೇವೆ ಎಂದರು. ಹಿಂದೆ ಶ್ರೀ ರೇವಣಸಿದ್ದೇಶ್ವರರು ಗೋಮಾತೆಯ ಹಾಲು ಕುಡಿಯುತ್ತಿದ್ದದು ಯಾರಿಗೂ ಗೊತ್ತಾಗುತ್ತಲೇ ಇರಲಿಲ್ಲ ಎಂದು ಕಥೆಯಲ್ಲಿ ಕೇಳಿದ್ದೇವೆ, ಅದಕ್ಕಾಗಿ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಗೋಪೂಜೆ ಮಾಡಲು ಸಹಕಾರ ಮಾಡಿಕೊಟ್ಟ ಸರ್ಕಾರಕ್ಕೆ ಅಭಿನಂದನೆಗಳು ಎಂದರು.
ಈ ಸಂದರ್ಭದಲ್ಲಿ ಸದಾಶಿವ ವಗ್ಗೆ ದೇವಸ್ಥಾನದ ಕಾರ್ಯದರ್ಶಿಗಳು, ವೀರಣ್ಣ ಗಂಗಾಣಿ ರೈತ ಮುಖಂಡರು, ನಾಗರಾಜ ಬಿರಾದಾರ,
ಅರ್ಚಕರಾದ ಶಾಂತಯ್ಯ ಸ್ವಾಮಿ, ಓಂಕಾರ ಮಡಪತಿ, ಸೋಮನಾಥ ಸ್ವಾಮಿ, ದೇವಸ್ಥಾನದ ಸಿಬ್ಬಂದಿಗಳಾದ ಗುರುಸಿದ್ದಯ್ಯ ಸ್ವಾಮಿ ಕಂಠಿ, ಮಲ್ಲಿಕಾರ್ಜುನ ರೇವಗ್ಗಿ, ಚಿಂಟು ಮತ್ತು ಪೊಲೀಸ್ ಸಿಬ್ಬಂದಿ, ವಿಶೇಷವಾಗಿ ಗೋರಕ್ಷಕರು, ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ತಾಯಂದಿರು ಉಪಸ್ಥಿತರಿದ್ದರು.
ವರದಿ ಎಸ್ ವಿ ಗಂಗಾಣಿ.



















