ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಮೇಶ ಕತ್ತಿ ವಿರುದ್ಧ ಕಠಿಣ ಕ್ರಮಕ್ಕೆ ವಾಲ್ಮೀಕಿ ಸಮಾಜ ಆಗ್ರಹ

ಬಳ್ಳಾರಿ / ಕಂಪ್ಲಿ: ವಾಲ್ಮೀಕಿ ಸಮುದಾಯಕ್ಕೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ರಮೇಶ ಕತ್ತಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಕಂಪ್ಲಿ ತಾಲೂಕು ಘಟಕ ಹಾಗೂ ನಗರ ಘಟಕದಿಂದ‌ ಪಟ್ಟಣದ ತಹಶೀಲ್ದಾರ್ ಕಛೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಗ್ರೇಡ್-೨ ತಹಶೀಲ್ದಾರ್ ಷಣ್ಮುಕಪ್ಪಗೆ ಮನವಿ ಪತ್ರ ಸಲ್ಲಿಸಿದರು.
ವಾಲ್ಮೀಕಿ ಸಮುದಾಯದ ಕಂಪ್ಲಿ ತಾಲೂಕು ಘಟಕದ ಅಧ್ಯಕ್ಷ ನೀರಗಂಟಿ ವೀರೇಶ ಮಾತನಾಡಿ, ‘ಜವಾಬ್ದಾರಿ ಸ್ಥಾನದಲ್ಲಿ ಇರುವ ರಮೇಶ ಕತ್ತಿ ಅವರು ವಾಲ್ಮೀಕಿ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಶೋಷಿತ ಸಮುದಾಯ ಹೀಯಾಳಿಸಿದ ಅವರಿಗೆ ಮುಂದೆ ಪ್ರತ್ಯುತ್ತರ ಕೊಡುತ್ತೇವೆ’ ಎಂದು ಎಚ್ಚರಿಕೆ ಕೊಡುವ ಜೊತೆಗೆ ಜಾತಿ ನಿಂದಿಸಿದ ರಮೇಶ ಕತ್ತಿಗೆ ಕಾನೂನುಕ್ರಮವಾಗಬೇಕು. ರಮೇಶ ವಿಶ್ವನಾಥ ಕತ್ತಿ ಇವರು ಸಾರ್ವಜನಿಕ ವೇದಿಕೆಯಲ್ಲಿ ವಾಲ್ಮೀಕಿ ಸಮಾಜದವರಿಗೆ ಅವಮಾನಕಾರಿ ಪದ ಬಳಕೆಯನ್ನು ಮಾಡಿದ್ದನ್ನು ಉಗ್ರವಾಗಿ ಖಂಡಿಸುತ್ತೇವೆ. ಸಂಪೂರ್ಣ ಅನುಸೂಚಿತ ಬುಡಕಟ್ಟು ಸಮುದಾಯವನ್ನು ಅವಹೇಳನಗುದ್ದಾರಿ ಈ ಪದ ಬಳಕೆ ಅತ್ಯಂತ ನಿಂದನೆ ಮತ್ತು ಮಾನ ಹಾನಿಕಾರಕ ಹಾಗೂ ಬುಡಕಟ್ಟು ಸಮುದಾಯದ ಗೌರವವನ್ನು ಉಲ್ಲಂಘಿಸಿದಂತಾಗಿದೆ. ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲು ಹಾಗೂ ತಕ್ಷಣವೇ ಬಂಧನಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಾಮಾಂಜಿನೀಯಲು, ತಾಲೂಕು ಉಪಾಧ್ಯಕ್ಷ ಡಿ.ವೀರಣ್ಣ, ಮುಖಂಡರಾದ ಹಾಲುಮಾರೋ ಈರಣ್ಣ, ಹೊನ್ನಳ್ಳಿ ದೇವಣ್ಣ, ಎಂ.ಲೋಕೇಶ, ರಂಗಯ್ಯ, ಶೇಖರ್, ನಾಗರಾಜ, ಟಿ.ದೇವ, ಟಿ.ರಾಮಯ್ಯ, ಲಿಂಗಪ್ಪ, ಗಿರಿಯಪ್ಪ, ಮಾವಿನಹಳ್ಳಿ ಮುದಿಯಪ್ಪ ಸೇರಿ ಅನೇಕ ಸಮಾಜದ ಮುಖಂಡರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!