ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಟಕಲ್ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ಲಕ್ಷ್ಮೀ ಪೂಜೆ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅತಿ ವಿಜೃಂಭಣೆಯಿಂದ ಅಂಗಡಿಗಳಲ್ಲಿ ದೀಪಾವಳಿ ಪ್ರಯುಕ್ತ ಸಾಯಂಕಾಲ 7 ಗಂಟೆ 30 ನಿಮಿಷಕ್ಕೆ ಗ್ರಾಮದ ಬಜಾರದಲ್ಲಿರುವ ಸುಮಾರು 50 ರಿಂದ 60 ಅಂಗಡಿಗಳಲ್ಲಿ ಏಕಕಾಲಕ್ಕೆ ಲಕ್ಷ್ಮೀ ಪೂಜೆ ನೆರವೇರಿತು.
ಈ ಪೂಜಾ ಕಾರ್ಯಕ್ರಮದಲ್ಲಿ ಮಠದ ಮಠಾಧೀಶರು ಗಳಾದ ಪೂಜ್ಯ ಷಟ್ ಸ್ಥಲ ಬ್ರಹ್ಮ ಶ್ರೀ ರೇವಣಸಿದ್ಧ ಶಿವಾಚಾರ್ಯರು ರೇವಣಸಿದ್ದೇಶ್ವರ ಹಿರೇಮಠ ರಟಕಲ್,
ಪೂಜ್ಯ ಷಟ್ ಸ್ಥಲ ಬ್ರಹ್ಮ ಶ್ರೀ ಡಾ.ಚನ್ನರುದ್ರಮನಿ ಶಿವಾಚಾರ್ಯರು ಸುಗೂರು,
ಪೂಜ್ಯಶ್ರೀ ನೀಲಕಂಠ ದೇವರು ದೊಡ್ಡ ಮಠ ರಟಕಲ್ ಮತ್ತು ಗ್ರಾಮದ ಸ್ವಾಮಿಗಳು ಭಾಗಿಯಾಗಿದ್ದರು.
ಅಂಗಡಿ ಮುಂಗಟ್ಟುಗಳು ಜಗಮಗಿಸೋ ಅಲಂಕಾರಿಕ ಲೈಟ್ ಗಳಿಂದ ರಾರಾಜಿಸುತ್ತಿದ್ದವು.
ಈ ಪೂಜಾ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ರಟಕಲ್ ಗ್ರಾಮದವರು ಉದ್ದಿಮೆದಾರರು, ಅಂಗಡಿಗಳ ಮಾಲೀಕರು, ಗ್ರಾಮದ ಮುಖಂಡರು ಮತ್ತು ತಾಯಂದಿರು.
ವಿಶೇಷವಾಗಿ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಲಗೆ,ಬಾಜಾ ಭಜಂತ್ರಿಯವರು ಸಹ ಭಾಗವಹಿಸಿದ್ದರು.

ವರದಿ ಎಸ್ ವಿ ಗಂಗಾಣಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!