ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಕ್ರಮ

ಧಾರವಾಡ :ದಿನಾಂಕ 16/10/2025 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಸಂಸ್ಥೆ ಸಹಭಾಗಿತ್ವದಲ್ಲಿ ತಾಲೂಕ ಪಂಚಾಯತ್ ಸಭಾಭವನ ಧಾರವಾಡದಲ್ಲಿ, ಧಾರವಾಡ ಹಾಗೂ ಅಳ್ಳಾವರ ತಾಲೂಕಿನ ಗ್ರಾಮ ಗ್ರಂಥಾಲಯಗಳ ಡಿಜಿಟಲ್ ಸಖಿಗಳಿಗೆ ಒಂದು ದಿನದ ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .ಈ ತರಬೇತಿ ಕಾರ್ಯಗಾರವನ್ನು ಪ್ರೊಬೆಷನರಿ ಐಎಎಸ್ ಅಧಿಕಾರಿಗಳು ಧಾರವಾಡ ಶ್ರೀಮತಿ ಹೃತಿಕಾ ವರ್ಮ ಹಾಗೂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಧಾರವಾಡ ಶ್ರೀ ಗಂಗಾಧರ್ ಕಂದಕೂರು, ಸಹಾಯಕ ನಿರ್ದೇಶಕರು ಧಾರವಾಡ ಶ್ರೀ ಚಂದ್ರು ಪೂಜಾರ್ ಹಾಗೂ ಸಂಜೀವಿನಿ ಒಕ್ಕೂಟದ ಜಿಲ್ಲಾ ಹಂತದ ಅಧಿಕಾರಿಗಳಾದ ಶ್ರೀ ವಿನೋದ್ ಕಂಠಿ ಹಾಗೂ ಡಿಎಂ ಆದ ಮಹೇಶ್ ಪಾಟೀಲ್, ತಾಲೂಕು ಪಂಚಾಯಿತಿಯ ವ್ಯವಸ್ಥಾಪಕರಾದ ಶ್ರೀ ವಿಜಯ ಮಣ್ಣೂರ್ ಸರ್ ಅವರು ದೀಪ ಬೆಳಗುವುದರ ಮೂಲಕ ತರಬೇತಿಗೆ ಚಾಲನೆಯನ್ನು ನೀಡಿದರು.
ತರಬೇತಿಯನ್ನು ಕುರಿತು ಪ್ರಾಸ್ತಾವಿಕವಾಗಿ ಶಿಕ್ಷಣ ಫೌಂಡೇಶನ್ ಬೆಳಗಾವಿ ವಿಭಾಗದ ಎಜಿಎಂ ಆದಂತಹ ಶ್ರೀ ಶಂಭುಲಿಂಗ ನಡುವಿನಮನಿ ಮಾತನಾಡಿದರು. ತರಬೇತಿಯನ್ನು ಶ್ರೀಶೈಲ್ ಅಥಣಿ ಹಾಗೂ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಧಾರವಾಡ ಜಿಲ್ಲಾ ಸಂಯೋಜಕರಾದ ಯಲ್ಲಪ್ಪ ಸಾಳುಂಕೆ ನಡೆಸಿಕೊಟ್ಟರು . ಈ ತರಬೇತಿಯಲ್ಲಿ ಶಿಕ್ಷಾ ಕೋ ಪೈಲೆಟ್ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಬಸವರಾಜ್ ಬಡಿಗೇರ್ ಹಾಗೂ ಸಂಶಿ ಗ್ರಂಥಾಲಯದ ತಾಂತ್ರಿಕ ತರಬೇತಿದಾರರಾದ ಹರ್ಷವರ್ಧನ್ ಹಾದಿಮನಿ ,ಟಿಪಿಎಂ ಬಸವರಾಜ್ ಶೆಟ್ಟೆಪ್ಪನವರ್ ಉಪಸ್ಥಿತರಿದ್ದರು.
ತರಬೇತಿಯನ್ನು ಯಲ್ಲಪ್ಪ ಸಾಳುಂಕೆ ನಿರೂಪಿಸಿ ಎಲ್ಲರನ್ನೂ ಸ್ವಾಗತಿಸಿದರು. ಈ ತರಬೇತಿಯಲ್ಲಿ 25 ಜನ ಗ್ರಾಮ ಗ್ರಂಥಾಲಯಗಳ ಡಿಜಿಟಲ್ ಸಖಿರವರು ಹಾಜರಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!