ಬೀದರ್ ಜಿಲ್ಲೆ ಬೀದರ್ ತಾಲ್ಲೂಕಿನ ಜನವಾಡ ಹತ್ತಿರ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್ ಬೆಂಬಲಿಗ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಹತ್ತು ವರ್ಷದ ನಂತರ ನಡೆದ ಚುನಾವಣೆಯಲ್ಲಿ ಒಟ್ಟು 13 ಸ್ಥಾನಗಳಲ್ಲಿ, 9 ಗೆಲುವು, ಅದರಲ್ಲಿ 4 ಅವಿರೋಧವಾಗಿ ಆಯ್ಕೆಯಾಗಿವೆ.
ಉಮಾ ಕಾಂತ್ ನಾಗಮಾರಪಳ್ಳಿ ಹಾಗೂ ಸೂರ್ಯಕಾಂತ್ ನಾಗಮಾರಪಳ್ಳಿ ನೇತೃತ್ವದ ಪೆನಾಲಿಗೆ ರೈತರ ಬೆಂಬಲ ದೊರೆತು ಚುನಾವಣೆಯಲ್ಲಿ4438 ಮತಗಳಿದ್ದು ಅದರಲ್ಲಿ 3015 ರೈತ ಮತದಾರರು ಹಕ್ಕು ಚಲಾಯಿಸಿದ್ದಾರೆ.
ಗುರುಪಾದಪ್ಪ ನಾಗಮಾರಪಳ್ಳಿ ಪೆನಲ್ ಗೆ ಬೆಂಬಲ ಕೊಟ್ಟು ವಿಜಯೋತ್ಸವ ನಡೆಸಿದರು.
ಈ ಗೆಲುವಿನ ಮೂಲಕ ಸಹಕಾರ ರಂಗದಲ್ಲಿ ನಾಗಮಾರಪಲ್ಲಿ ಕುಟುಂಬ ಬಲವನ್ನು ಮತ್ತೊಮ್ಮೆ ತೋರಿಸಿದೆ. ಸಹಕಾರ ರಂಗದಲ್ಲಿ ಅವರ ಪ್ರಭಾವ ಕಡಿಮೆಯಾಗಿದೆ ನಾಗಮಾರಪಳ್ಳಿ ಕುಟುಂಬದ ಸೂರ್ಯಕಾಂತ್ ನಾಗಮಾರಪಳ್ಳಿ ಗೆಲುವಿನ ನಂತರ ಹೇಳಿಕೆ ನೀಡಿ “ಇದು ನಮ್ಮ ಗೆಲುವು ಅಲ್ಲ ಜಿಲ್ಲೆಯ ರೈತರ ಗೆಲುವು, ನಮ್ಮ ಕುಟುಂಬದ ಮೇಲೆ ರೈತರು ಇಟ್ಟಿರುವ ನಂಬಿಕೆಯನ್ನು ನಾವು ಉಳಿಸಿಕೊಳ್ಳುತ್ತೇವೆ” ಎಂದರು. ಗುರುಪಾದಪ್ಪ ನಾಗಮಾರಪಳ್ಳಿ ಪೆನಲ್ ಗೆ ರೈತರ ಬೆಂಬಲ ದೊರೆತು ಸಹಕಾರ ರಂಗದಲ್ಲಿ ಅವರ ಪಾರುಪತ್ಯ ಮತ್ತೊಮ್ಮೆ ಗೆಲುವಿನ ನಂತರ ಬೆಂಬಲಿಗರ ವಿಜಯೋತ್ಸವ ನಡೆದಿದೆ.
ವರದಿ ಸಂಗಮೇಶ್ ಚಿದ್ರೆ



















