ಬಳ್ಳಾರಿ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ದಿನಗಳಲ್ಲಿ ಆಯೋಜನೆಗೊಳ್ಳುವ ಜೂಜು ಅಡ್ಡೆಗಳ ಮೇಲೆ ಜಿಲ್ಲಾ ಪೊಲೀಸರು ದಾಳಿ ಸಂಘಟಿಸಿದ್ದು, 178 ಪ್ರಕರಣಗಳು ದಾಖಲಾಗಿವೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಅ. 20ರಿಂದ 22ರ ವರೆಗೆ ಮೂರು ದಿನ ನಡೆದ ಈ ದಾಳಿಯಲ್ಲಿ ಒಟ್ಟು 1136 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ₹17,31,140 ದಂಡ ವಿಧಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಟೇಲ್, ಲಾಡ್ಜ್, ಕಚೇರಿಗಳು, ಹೊಲ, ತೋಟ, ತೋಟದ ಮನೆಗಳು ಸೇರಿದಂತೆ ಹಲವು ಕಡೆ ವ್ಯಾಪಕವಾಗಿ ಇಸ್ಪೀಟ್ ಆಡಲಾಗುತ್ತದೆ. ಈ ಕುರಿತ ದೂರುಗಳು, ಖಚಿತ ಮಾಹಿತಿ ಆಧರಿಸಿ ಪೊಲೀಸ್ ಇಲಾಖೆ ಈ ದಾಳಿ ನಡೆಸಿದೆ.
ಕಳೆದ ವರ್ಷವೂ 137 ಪ್ರಕರಣಗಳಲ್ಲಿ, 833 ಮಂದಿಯ ವಿರುದ್ಧ ಕೇಸು ಹಾಕಲಾಗಿತ್ತು. 16,44,665 ಹಣ ವಶಕ್ಕೆ ಪಡೆಯಲಾಗಿತ್ತು. 2023ರಲ್ಲಿ ಒಟ್ಟು 101 ಪ್ರಕರಣಗಳಲ್ಲಿ 660 ಮಂದಿಯನ್ನು ಬಂಧಿಸಿ, ₹10,83,800 ವಶಪಡಿಸಿಕೊಳ್ಳಲಾಗಿತ್ತು.
ವರದಿ : ಜಿಲಾನಸಾಬ್ ಬಡಿಗೇರ್




















One Response
Thank you for the sensible critique. Me & my neighbor were just preparing to do some research about this. We got a grab a book from our local library but I think I learned more clear from this post. I am very glad to see such great information being shared freely out there.