
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿರುವ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ ಇದೀಗ ರಾಜಕೀಯ ವಲಯದಲ್ಲಿ ತೀವ್ರವಾಗಿ ಕುತೂಹಲ ಮೂಡಿಸಿದೆ. ಈ ಚುನಾವಣೆಯನ್ನು ಮೂರು ಪ್ರಮುಖ ರಾಜಕೀಯ ಪಕ್ಷಗಳು ಒಟ್ಟಾಗಿ ವ್ಯಕ್ತಿಗತವಾಗಿ ನಡೆಸುತ್ತಿರುವುದು ವಿಶೇಷವಾಗಿದೆ. ಕೃಷ್ಣ ಸಕ್ಕರೆ ಕಾರ್ಖಾನೆಯಲ್ಲಿ ಒಟ್ಟು ಸುಮಾರು 11,000 ಮತದಾರರು ಇದ್ದಾರೆ! ಯಾವ ಪ್ಯಾನಲಿಗೆ ಅಧಿಕಾರ ಅನ್ನುವುದೇ ಕುತೂಲವಾಗಿದೆ.
ಈ ಚುನಾವಣೆಯು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಚುನಾವಣೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮತದಾರರಲ್ಲಿ ಕುತೂಹಲ ಮೂಡಿದೆ. ಇದೆ ಕಾರಣದಿಂದಾಗಿಯೇ ಇದು ತುರುಸಿನ ಚುನಾವಣೆಯಾಗಿ ಪರಿಣಮಿಸಿದೆ.
ಅಥಣಿಯಲ್ಲಿ ನಡೆಯುತ್ತಿರುವ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯ ರಾಜಕೀಯ ಚಟುವಟಿಕೆಗಳು ತೀವ್ರಗತಿಯಲ್ಲಿವೆ. ಇಬ್ಬರು ಪ್ರಮುಖ ಪ್ಯಾನೆಲ್‌ಗಳು ಮುಖಾಮುಖಿಯಾಗಿದ್ದು,
ಇಬ್ಬರು ಶಕ್ತಿಶಾಲಿ ಪ್ಯಾನೆಲ್‌ಗಳ ನಡುವೆ ಪೈಪೋಟಿಯಾಗಿದೆ.
ಸದಸ್ಯರ ಮತದಾನ ಉತ್ಸಾಹ ಹೆಚ್ಚಾಗಿದೆ. ಚುನಾವಣೆಯ ಫಲಿತಾಂಶ ಕಾರ್ಖಾನೆಯ ಆಡಳಿತದ ಭವಿಷ್ಯ ತೀರ್ಮಾನಿಸಲಿದೆ.
ಚುನಾವಣೆಯಲ್ಲಿ ಯಾರಿಗೆ ಗೆಲುವು ಸಿಗಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ ಈ ಜಿದ್ದಾಜಿದ್ದಿನ ಚುನಾವಣೆಯ ಫಲಿತಾಂಶಕ್ಕಾಗಿ ಅಥಣಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ಕಾತರದಿಂದ ಕಾಯುತ್ತಿದ್ದಾರೆ.
ವರದಿ. ವಿಠ್ಠಲ ಖೋಕಾಟೆ



















