ಮಂಡ್ಯ :ದಿನಾಂಕ 25.10.2025 ರಂದು ಮಂಡ್ಯದ ತಗ್ಗಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಂಘ ಸಭೆ ನಡೆಸಿದ್ದು ಈ ಸಭೆಗೆ ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಸುಮಾರು 150 ಕ್ಕೂ ಹೆಚ್ಚು ವಿವಿಧ ಸರ್ಕಾರಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಿಕ್ಷಣ ಪ್ರೇಮಿಗಳು ಆಗಮಿಸಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಚಲುವರಸನ ಕೊಪ್ಪಲು ಸರ್ಕಾರಿ ಶಾಲೆಯ ಮುಖ್ಯ ಉಪಾಧ್ಯಾಯರಾದ ಕುಮಾರ್ ಹಾಗೂ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ನರಸಿಂಹಮೂರ್ತಿ ಹಾಗೂ ರೈತ ಮುಖಂಡರುಗಳು ಎಸ್ ಡಿ ಎಮ್ ಸಿ ರಾಜ್ಯ ಪದಾಧಿಕಾರಿಗಳು ಸೇರಿ ಉದ್ಘಾಟಿಸಿದರು. ಇಡೀ ಕರ್ನಾಟಕದಾದ್ಯಂತ ಹಾಗೂ ದೇಶದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಏಕರೂಪ ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಕಾರ್ಯಕ್ರಮದಲ್ಲಿ ಒಮ್ಮತದ ಅಭಿಪ್ರಾಯ ಮೂಡಿತು. ಈ ಕಾರ್ಯಕ್ರಮವನ್ನು ತಗ್ಗಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಅನಿಲ್ ಹಾಗೂ ತಂಡದವರು ಅಚ್ಚುಕಟ್ಟಾಗಿ ಆಯೋಜನೆ ಮಾಡಿದರು. ರಾಜ್ಯ ಪದಾಧಿಕಾರಿಗಳಾದ ಬುದನೂರು ರಘು, ಸಂತೋಷ್ ಮಂಡ್ಯಗೌಡ, ಕೂರ್ಗಳ್ಳಿ ರೇವಣ್ಣ, ಅಡ್ವೋಕೇಟ್ ರಘುಪತಿ, ಕೀಲಾರ ರಮೇಶ್, ಶಶಿಧರ್ ಹಾಗೂ ರಾಜ್ಯ ಪದಾಧಿಕಾರಿಗಳು, ಎಲ್ಲಾ ಜಿಲ್ಲೆಯ ಸುಮಾರು 150ಕ್ಕೂ ಹೆಚ್ಚು ಎಸ್‌ಡಿಎಂಸಿ ಅಧ್ಯಕ್ಷರು ಸದಸ್ಯರು ಉಪಾಧ್ಯಕ್ಷರು ಶಿಕ್ಷಣ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ ಹೆಚ್. ಆರ್. ಶಂಕರ್



















