
ಬೆಳಗಾವಿ : ಅಥಣಿ ತಾಲ್ಲೂಕಿನ ಪ್ರತಿಷ್ಠಿತ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ.
ಈ ಚುನಾವಣೆಯಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಲಕ್ಷ್ಮಣ್ ಸವದಿ ಅವರ ಬಣದ ರೈತ ಪ್ಯಾನಲ್ ಭರ್ಜರಿ ಗೆಲುವು ದಾಖಲಿಸಿದೆ.
ಒಟ್ಟು ನಿರ್ದೇಶಕ ಸ್ಥಾನಗಳ ಪೈಕಿ ಬಹುಪಾಲು ಸ್ಥಾನಗಳನ್ನು ರೈತ ಪ್ಯಾನಲ್ ತನ್ನದಾಗಿಸಿಕೊಂಡಿದ್ದು, ಕಾರ್ಖಾನೆ ರಾಜಕೀಯದಲ್ಲಿ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿದೆ.
ಫಲಿತಾಂಶ ಘೋಷಣೆಯ ನಂತರ ರೈತ ಪ್ಯಾನಲ್ ಬೆಂಬಲಿಗರು ವಿಜಯೋತ್ಸವವನ್ನು ಆಚರಿಸಿದರು.
ಪಟಾಕಿ ಸಿಡಿಸುವ ಮೂಲಕ ಕಾರ್ಖಾನೆ ಆವರಣ ಸಂಭ್ರಮಭರಿತವಾಯಿತು.
ಈ ಗೆಲುವಿನ ಹಿನ್ನೆಲೆಯಲ್ಲಿ ಅಥಣಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಈಗ ರೈತ ಪ್ಯಾನಲ್ ಗೆಲುವಿನ ಸಂಭ್ರಮವಿದೆ.
ಮಾಜಿ ಶಾಸಕರಾದ ಶ್ರೀ ಮಹೇಶ್ ಕುಮಟ್ಟಳ್ಳಿ, ಶ್ರೀ ಶಹಜಾನ್ ಡೋಂಗರಗಾಂವ, ಶ್ರೀ ಶ್ರೀಮಂತ ಪಾಟೀಲ್ ಹಾಗೂ ಕಾಂಗ್ರೆಸ್ ಮುಖಂಡರಾದ ಗಜಾನನ್ ಮಂಗಸೂಳಿ ಇವರ ನೇತೃತ್ವದಲ್ಲಿ ಸ್ವಾಭಿಮಾನಿ ಪ್ಯಾನಲ್ ರಚಿಸಿದ್ದರು ರೈತ ಪ್ಯಾನಲ್ ಮಣಿಸಲು ಕಾರ್ಯತಂತ್ರ ರೂಪಿಸಿದ್ದರು ಆದರೆ ರೈತ ಪೇನಲ್ ಬಹುಪಾಲು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.
ವರದಿ. ವಿಠ್ಠಲ ಖೋಕಾಟೆ




















