ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕರಡಿ ರಂಗನಾಥಪುರ ಗ್ರಾಮದ ಶ್ರೀ ಎಲ್ಲಮ್ಮ ದೇವಿ ದೇವಾಲಯದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕೆರಗೋಡಿ ರಂಗಾಪುರ ಸುಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಗುರುಪರದೇಶಿ ಕೇಂದ್ರ ಮಹಾಸ್ವಾಮೀಜಿಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಹಾಗೂ ಸ್ವಚ್ಛತೆ ಕಾಪಾಡುವುದೇ ನಿಜವಾದ ದೇವರ ಕಾರ್ಯ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಳಸಬೇಕು ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡಬೇಕೆಂದು ತಿಳಿಸಿದರು. ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷರಾದ ಕರಡಿ ದೇವರಾಜು ಈ ಗ್ರಾಮಕ್ಕೆ ನೀಡುತ್ತಿರುವ ಸಹಕಾರ ಹಾಗೂ ಈ ಒಗ್ಗಟ್ಟು ಹೀಗೆ ಇರಲಿ ಎಂದು ಹಾಗೂ ದೇವರಾಜು ತಾಲೂಕು ಮಟ್ಟದ ನಾಯಕನಾಗಿ ಬೆಳೆದಿದ್ದು ಇವರಿಗೆ ದೇವರು ಸಕಲವನ್ನು ಕರುಣಿಸಲೆಂದು ಹಾರೈಸಿದರು
ಮಾಜಿ ಸಚಿವರಾದ ಬಿ ಸಿ ನಾಗೇಶ್ ಮಾತನಾಡಿ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿರುವುದು ಒಂದು ಉತ್ತಮ ಬೆಳವಣಿಗೆ ಹೀಗೆ ಮುಂದುವರೆಸಬೇಕೆಂದು ತಿಳಿಸಿದರು.
ವೈದ್ಯರಾದ ಡಾ. ಶ್ರೀಧರ್ ಮಾತನಾಡಿ ಇಂದಿನ ಸನ್ನಿವೇಶದಲ್ಲಿ ಆರೋಗ್ಯ ತುಂಬಾ ಮುಖ್ಯವಾಗಿದ್ದು ಸೂಕ್ತ ವೈದ್ಯಕೀಯ ಸಲಹೆಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಕೇಂದ್ರ ಸಚಿವರಾದ ವಿ ಸೋಮಣ್ಣ ಸಮಾರಂಭದಲ್ಲಿ ಭಾಗವಹಿಸಬೇಕಾಗಿತ್ತು ಆದರೆ ಇಲಾಖೆಯ ತುರ್ತು ಕಾರ್ಯ ನಿಮಿತ್ತ ದೆಹಲಿಗೆ ಹೋಗಿರುವುದರಿಂದ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಿಲ್ಲವೆಂದು ವಿಡಿಯೋ ಸಂದೇಶದ ಮೂಲಕ ಶುಭ ಹಾರೈಸಿದರು.
ಚಿತ್ರನಟ ದೊಡ್ಡಣ್ಣ ಕೂಡ ಅನಾರೋಗ್ಯದ ಕಾರಣ ಸಮಾರಂಭದಲ್ಲಿ ಹಾಜರಾಗಲು ಸಾಧ್ಯವಿಲ್ಲದೆ ಇರುವುದರಿಂದ ವಿಡಿಯೋ ಸಂದೇಶದ ಮೂಲಕ ಶುಭ ಹಾರೈಸಿ ಮುಂದಿನ ದಿನಗಳಲ್ಲಿ ದೇವಾಲಯಕ್ಕೆ ಬಂದು ದೇವಿಯ ಆಶೀರ್ವಾದ ಪಡೆಯುತ್ತೇನೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಮಾಜ ಸೇವಕ ಬೋರ್ ವೆಲ್ ಮಧುಸೂದನ್, ತಿಪಟೂರು ನಗರಸಭಾ ಸದಸ್ಯರಾದ ಶಶಿಕಿರಣ್ ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೆ ಆರ್ ದೇವರಾಜು, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ನ್ಯಾಕೇನಹಳ್ಳಿ ವೀರಣ್ಣ, ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾದ ಕೆ ಜಿ ರಂಗಸ್ವಾಮಿ, ದೇವಾಲಯದ ಕನ್ವೀನರ್ ಶ್ರೀನಿವಾಸ್, ಗ್ರಾಮ ಪಂಚಾಯತಿ ಸದಸ್ಯರಗಳು ಸೇರಿದಂತೆ ಅಧಿಕ ಸಂಖ್ಯೆಯ ಭಕ್ತಾದಿಗಳು ಹಾಜರಿದ್ದರು. ಪ್ರಾಂಶುಪಾಲರಾದ ರೇಣುಕಯ್ಯ ಕಾರ್ಯಕ್ರಮ ನಿರೂಪಿಸಿದರು.
ವರದಿ ಮನು ಸಿಡ್ಲೆಹಳ್ಳಿ




















